ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಕಾಲರ್‌ಟ್ಯೂನ್‌ ಕಿರಿಕಿರಿ ತಪ್ಪಲಿ

Last Updated 2 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಕೊರೊನಾ ವೈರಸ್ ದೇಶದಲ್ಲಿ ಕಾಣಿಸಿಕೊಂಡಾಗಿನಿಂದ ಇಂದಿನವರೆಗೂ ನಾಗರಿಕರ ಮೊಬೈಲ್‌ ಫೋನ್‌ನಲ್ಲಿ ಕೊರೊನಾ ಬಗೆಗೆ ಜಾಗೃತಿ ಮೂಡಿಸುವಂತಹ ಕಾಲರ್‌ಟ್ಯೂನ್ ಹೆಚ್ಚು ಸದ್ದು ಮಾಡುತ್ತಿದೆ. ತುರ್ತಾಗಿ ಕರೆ ಮಾಡಬೇಕಾದವರು ಇದರಿಂದ ಕಿರಿಕಿರಿ ಅನುಭವಿಸುವಂತಾಗಿದೆ. ದಿನದಲ್ಲಿ ಒಂದೇ ಸಂಖ್ಯೆಗೆ ಹಲವು ಬಾರಿ ಕರೆ ಮಾಡಿದರೂ ಅದೇ ಕಿರಿಕಿರಿ. ಹೆಚ್ಚು ಕರೆಗಳನ್ನು ಮಾಡುವವರಂತೂ ಮಾನಸಿಕ ಹಿಂಸೆಗೆ ಒಳಗಾಗಿದ್ದಾರೆ. ನಾಲ್ಕು ತಿಂಗಳಿನಿಂದ ಇದನ್ನೇ ಕೇಳಿ ಕೇಳಿ ಸಾಕಾಗಿದೆ.

ಸರ್ಕಾರ ವಿಧಿಸುವ ನಿರ್ಬಂಧಗಳು, ನಿಯಮಗಳನ್ನು ನಾಗರಿಕರು ಪಾಲಿಸುತ್ತಾ ಬಂದಿದ್ದಾರೆ. ಈಗ ನಿರ್ಬಂಧಗಳನ್ನು ಸರ್ಕಾರ ಹಂತ ಹಂತವಾಗಿ ಸಡಿಲಗೊಳಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟಿದೆ. ದೇಶದಲ್ಲಿ ಕೆಲವು ವಲಯಗಳನ್ನು ಬಿಟ್ಟರೆ ಭಾಗಶಃ ಎಲ್ಲಾ ರೀತಿಯ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ನಾಗರಿಕರು ಕೂಡ ಈಗ ಜಾಗೃತರಾಗಿದ್ದಾರೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಅನ್ನು ಉಪಯೋಗಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಈಗಲಾದರೂ ಕೊರೊನಾ ಕಾಲರ್‌ಟ್ಯೂನ್‌ ಕಿರಿಕಿರಿ ನಿಲ್ಲಿಸಿ, ಮೊಬೈಲ್‌ ಬಳಕೆದಾರರಿಗೆ ಇರುಸುಮುರುಸು ತಪ್ಪಿಸಲಿ.

– ಮುರುಗೇಶ ಡಿ., ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT