ಮಂಗಳವಾರ, ಆಗಸ್ಟ್ 4, 2020
24 °C

ಕೋವಿಡ್‌ ಪತ್ತೆ ಯಂತ್ರ: ಸಮಜಾಯಿಷಿ ನೀಡಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎದೆ ಭಾಗವನ್ನು ಎಕ್ಸ್‌ರೇ ಮಾಡುವುದರಿಂದ ಕೋವಿಡ್ ಪತ್ತೆ ಮಾಡಬಹುದು ಎಂಬುದು (ಪ್ರ.ವಾ., ಜುಲೈ 8) ಭರವಸೆದಾಯಕ ವಾರ್ತೆ. ಅದರಲ್ಲೂ ಕನ್ನಡಿಗರ ಈ ಸಂಶೋಧನೆ ಕನ್ನಡಿಗರಿಗೆ ಹೆಮ್ಮೆಯ ವಿಷಯ. ‘ಈ ಎಕ್ಸ್‌ರೇ ಯಂತ್ರ ಸೇರಿದಂತೆ ದೇಶೀಯವಾಗಿ ಅಭಿವೃದ್ಧಿಪಡಿಸಿದ ಆರು ಪ್ರಮುಖ ಉತ್ಪನ್ನಗಳಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಾನ್ಯತೆ ಸಿಕ್ಕಿದೆ. ಈ ಕ್ಷಣದಿಂದಲೇ ಈ ಎಲ್ಲವನ್ನೂ ಎಲ್ಲರೂ ಬಳಸಬಹುದು. ಖರೀದಿ ಮಾಡಬಹುದು’ ಎಂದು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಈ ಸಾಧನಗಳನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಹೇಳಿದ್ದಾರೆ.

ಆದರೆ ಎಲ್ಲರೂ ಎಂದರೆ ಯಾರು? ಈ ಕ್ಷಣದಿಂದಲೇ ಎಂದರೆ, ಈ ಸಾಧನಗಳು ಅಗತ್ಯವಾದಷ್ಟು ಪ್ರಮಾಣದಲ್ಲಿ ಲಭ್ಯವಿವೆಯೇ? ಇವು ದೊರೆಯುವ ಸ್ಥಳಗಳು ಯಾವುವು? ಇದಕ್ಕೆ ವೈದ್ಯಲೋಕದ ಪ್ರತಿಕ್ರಿಯೆ ಏನು? ಈ ಪ್ರಶ್ನೆಗಳು ಪ್ರಸ್ತುತ ಅಲ್ಲವೇ? ಈ ನಿಟ್ಟಿನಲ್ಲಿ ಸಚಿವರು ಸ್ಪಷ್ಟವಾದ ಸಮಜಾಯಿಷಿ ನೀಡಬೇಕು.

- ಸಾಮಗ ದತ್ತಾತ್ರಿ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು