ಸೋಮವಾರ, ನವೆಂಬರ್ 18, 2019
26 °C

ವಿದ್ಯುತ್ ಅವಘಡ: ಮುನ್ನೆಚ್ಚರಿಕೆ ಅತ್ಯಗತ್ಯ

Published:
Updated:

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಅವಘಡಗಳಿಂದ ಸಾವು– ನೋವು ಹೆಚ್ಚಾಗುತ್ತಿರುವುದು ವಿಷಾದಕರ. ಕೊಪ್ಪಳದ ಹಾಸ್ಟೆಲ್ ವಿದ್ಯಾರ್ಥಿಗಳ ಸಾವಿನ ಪ್ರಕರಣ ಜನರ ಮನಸ್ಸಿನಿಂದ ಮರೆಯಾಗುವ ಮುನ್ನವೇ ಚನ್ನರಾಯಪಟ್ಟಣ ತಾಲ್ಲೂಕಿನ ಅಗಸರಹಳ್ಳಿ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಬುಧವಾರ ಸಾವಿಗೀಡಾಗಿರುವುದು ಮನಕಲಕುತ್ತದೆ. ರಾಜ್ಯದ ವಿದ್ಯುತ್ ಅಂಗಸಂಸ್ಥೆಗಳು ಸಾರ್ವಜನಿಕರ ರಕ್ಷಣೆಗೆ ಅತ್ಯಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

ರಾಜ್ಯದ ಹಲವೆಡೆ ಜನದಟ್ಟಣೆಯ ಪ್ರದೇಶಗಳಲ್ಲಿ ಸಾವಿಗೆ ಆಹ್ವಾನ ನೀಡುವಂತಹ ಜೋಡಿ ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್‌ಫಾರ್ಮರ್‌ಗಳು, ಮನೆಯ ಕಿಟಕಿ, ಬಾಗಿಲುಗಳಿಂದ ಕೈ ಹೊರಚಾಚಿದರೂ ತಗಲುವಂತಹ ವಿದ್ಯುತ್ ಲೈನ್‍ಗಳು ತೀವ್ರ ಆತಂಕ ಹುಟ್ಟಿಸುವಂತಿವೆ. ಸಾವು ನೋವಿನ ಘಟನೆ ವರದಿಯಾದ ಸಂದರ್ಭದಲ್ಲಿ ತನಿಖೆಯ ಹೆಸರಿನಲ್ಲಿ ಕಾಲಹರಣ ಮಾಡುವ ಬದಲು, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾದುದು ಅತ್ಯಗತ್ಯ.

–ತಿಮ್ಮೇಶ ಮುಸ್ಟೂರು, ಜಗಳೂರು

ಪ್ರತಿಕ್ರಿಯಿಸಿ (+)