ದಲಿತ ಮುಖ್ಯಮಂತ್ರಿ: ಈಗಲೇ ಯಾಕಾಗದು?
ಜಾತಿ ಆಧಾರಿತ ಮುಖ್ಯಮಂತ್ರಿ ಆಯ್ಕೆ ಕುರಿತು ಚರ್ಚೆ ಶುರುವಾಗಿರುವುದು ದುರಂತವೇ ಸರಿ. ಆದರೆ ಈ ಚರ್ಚೆ ಮೊದಲು ಶುರುವಾಗಿದ್ದು ರಾಜ್ಯದ ಪ್ರಬಲ ಜಾತಿಗಳ ಮುಖಂಡರು ಮತ್ತು ಪಾರ್ಟ್ ಟೈಮ್ ಮಠಾಧೀಶ ರಾಜಕಾರಣಿಗಳಿಂದ. ಆದ್ದರಿಂದ ಪ್ರಸ್ತುತ ತಳ ಸಮುದಾಯಗಳಿಂದಲೂ ಮುಖ್ಯಮಂತ್ರಿ ಸ್ಥಾನದ ಬೇಡಿಕೆ ಬಂದಿರುವುದು ಸಹಜ ಮತ್ತು ಅಗತ್ಯ ಕೂಡ. ಆದರೆ ವಿಚಿತ್ರವೆಂದರೆ ಸಂಖ್ಯಾಬಲವೇ ಇಲ್ಲದಿರುವ, ಅಧಿಕಾರದಿಂದ ದೂರವಿರುವ ಪಕ್ಷದಿಂದ ದಲಿತ ಮುಖ್ಯಮಂತ್ರಿಯಾಗಬೇಕು ಎಂದು ಚರ್ಚೆ ಶುರುವಾಗಿರುವುದು. ಕಾಂಗ್ರೆಸ್‌ನಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುವಷ್ಟು ಪ್ರಬಲ ಮುತ್ಸದ್ದಿ ದಲಿತ ರಾಜಕಾರಣಿಗಳು ಇದ್ದಾರೋ ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ ಈಗ ಆಡಳಿತ ನಡೆಸುತ್ತಿರುವ ಬಿಜೆಪಿಯಲ್ಲಿ ದಲಿತ ನಾಯಕರು ಇಲ್ಲವೇ?
ಈಗ ಹೇಗಿದ್ದರೂ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ಶುರುವಾಗಿದೆ. ಹಾಗಾಗಿ ಬಿಜೆಪಿಯಿಂದ ಯಾಕೆ ದಲಿತ ಸಮುದಾಯಕ್ಕೆ ಸೇರಿದವರೊಬ್ಬರು ಮುಖ್ಯಮಂತ್ರಿಯಾಗಬಾರದು? ಆಗ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಗಾಗಿ 2023ರವರೆಗೆ ಕಾಯಬೇಕಿಲ್ಲ, 2021ರಲ್ಲೇ ಅದು ಕಾರ್ಯರೂಪಕ್ಕೆ ಬರುತ್ತದೆ.
ಮುಂದಿನ ಚುನಾವಣೆಯಲ್ಲಿ ರಾಜ್ಯದ ಮೂರು ಪ್ರಮುಖ ಪಕ್ಷಗಳೂ ದಲಿತ ಸಮುದಾಯದ ನಾಯಕರನ್ನು ಮುಖ್ಯಮಂತ್ರಿ ಅಭ್ಯರ್ಥಿಗಳನ್ನಾಗಿ ಘೋಷಿಸಿ ಚುನಾವಣೆ ಎದುರಿಸಲಿ. ಆಗ ಯಾರಿಗೆ ಬಹುಮತ ಬರುತ್ತದೋ ಆ ಪಕ್ಷದಿಂದ ದಲಿತ ಮುಖ್ಯಮಂತ್ರಿಯಾಗಲಿ.
–ನಂದನ್ ಖಂಡೇನಹಳ್ಳಿ, ಚಿತ್ರದುರ್ಗ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.