ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ‘ಮಹಾನ್‌ ದಾನ’ಕ್ಕೆ ಎಣೆಯಿಲ್ಲ

Last Updated 6 ಜನವರಿ 2021, 15:45 IST
ಅಕ್ಷರ ಗಾತ್ರ

ಇತ್ತೀಚೆಗೆ ನಿಧನರಾದ ನಿವೃತ್ತ ಡಿಜಿಪಿ ಪಿ.ಜಿ.ಹರ್ಲಂಕರ್ ಅವರ ಇಚ್ಛೆಯಂತೆ ಕುಟುಂಬದವರು ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆಗೆ ದಾನ ಮಾಡಿದ್ದನ್ನು ತಿಳಿದು, ಆ ಕುಟುಂಬದವರ ಮೇಲೆ ಅಭಿಮಾನ ಮೂಡಿತು. ಈ ಹಿಂದೆಯೂ ಅನೇಕ ಖ್ಯಾತನಾಮರು ಶರೀರ ದಾನ ಮಾಡಿ ಅಮರರಾಗಿರುವ ನಿದರ್ಶನಗಳಿವೆ.

ತಜ್ಞ ವೈದ್ಯರ ಅಭಿಪ್ರಾಯದಂತೆ, ಮೃತ ಶರೀರದ ಅಂಗಾಂಗಗಳು, ಕಲಿಕೆಯ ಹಂತದಲ್ಲಿರುವ ವೈದ್ಯಕೀಯ ವಿದ್ಯಾರ್ಥಿಗಳ ಪ್ರತ್ಯಕ್ಷ ಅಧ್ಯಯನ ಹಾಗೂ ಸಂಶೋಧನೆಗೆ ಬಹಳಷ್ಟು ಸಹಕಾರಿಯಾಗಬಲ್ಲವು. ಮಣ್ಣಲ್ಲಿ ಮಣ್ಣಾಗುವ ಈ ಮೃತ ಶರೀರದಿಂದ ಅಸಂಖ್ಯಾತ ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವುದಾದರೆ, ಅದಕ್ಕಿಂತ ‘ಮಹಾನ್ ದಾನ’ ಬೇರೆ ಯಾವುದಿದೆ?

-ಜಿ.ರಾಜಣ್ಣ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT