ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ದಂಡ ವಿಧಿಸುವ ಅಧಿಕಾರ ಅಗತ್ಯ

Last Updated 31 ಆಗಸ್ಟ್ 2021, 19:31 IST
ಅಕ್ಷರ ಗಾತ್ರ

ಕೆಲವು ಐಎಎಸ್ ಅಧಿಕಾರಿಗಳು, ಇಲಾಖಾ ಕಾರ್ಯದರ್ಶಿಗಳು, ನಿಗಮಗಳ ನಿರ್ದೇಶಕರು ಸೇರಿ ಉನ್ನತ ಹುದ್ದೆಯಲ್ಲಿರುವ ಅನೇಕರು ಅದೇಕೋ ಕನ್ನಡವೆಂದರೆ ಮುಖ ಕಿವುಚುತ್ತಾರೆ. ಅಧಿಕಾರ ಸ್ವೀಕರಿಸಿದ ಆರು ತಿಂಗಳೊಳಗೆ ಕನ್ನಡ ಕಲಿಯಬೇಕೆಂಬ ಸರ್ಕಾರಿ ಆದೇಶಕ್ಕೆ ಇವರಲ್ಲಿ ಬೆಲೆಯೇ ಇಲ್ಲದಂತಾಗಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಅವರು ಸುಮಾರು 75ಕ್ಕೂ ಹೆಚ್ಚು ಅಧಿಕಾರಿಗಳಿಗೆ ನೆನಪೋಲೆ ಕಳಿಸಿದ್ದು, ಯಾರೊಬ್ಬರೂ ಉತ್ತರಿದೆ ಕಸದ ಬುಟ್ಟಿಗೆ ಹಾಕಿದ್ದಾರಂತೆ. ಅವರ ಮೇಲಧಿಕಾರಿಗಳಿಗೆ ಹೇಳಿದರೆ ಅವರೂ ಕಿವಿಗೆ ಹಾಕಿಕೊಂಡಿಲ್ಲವಂತೆ. ಇದಕ್ಕೂ ಮೀರಿ ಹೆಚ್ಚಿನ ಅಧಿಕಾರವಿಲ್ಲದ ಪ್ರಾಧಿಕಾರ ಅಸಹಾಯಕವಾಗಿದೆ. ಸರ್ಕಾರವು ಸುಗ್ರೀವಾಜ್ಞೆಯ ಮೂಲಕ, ಪ್ರಾಧಿಕಾರಕ್ಕೆ ಲಕ್ಷಗಟ್ಟಲೆ ದಂಡ ವಿಧಿಸುವ ಅಧಿಕಾರ ನೀಡಿ ಕನ್ನಡದ ಅಸ್ಮಿತೆಯನ್ನು ಉಳಿಸಬೇಕು.

-ಕೆ.ಶ್ರೀನಿವಾಸ ರಾವ್, ಹರಪನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT