ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಡೆಮು ರೈಲೂ ಪುನರಾರಂಭವಾಗಲಿ

Last Updated 17 ಸೆಪ್ಟೆಂಬರ್ 2021, 17:32 IST
ಅಕ್ಷರ ಗಾತ್ರ

ಕೊರೊನಾ ಕಾರಣದಿಂದ ರೈಲ್ವೆ ಇಲಾಖೆ ಸ್ಥಗಿತಗೊಳಿಸಿದ್ದ ‘ಡೆಮು’ ರೈಲುಗಳ ಸಂಚಾರ ಪುನರಾರಂಭ ವಾಗಿದೆ. ಹೀಗಾಗಿ ರಾಯಚೂರು- ಕಲಬುರ್ಗಿ- ರಾಯಚೂರು ಮತ್ತು ಬೀದರ್‌- ಕಲಬುರ್ಗಿ- ಬೀದರ್‌ ನಡುವಿನ ಡೆಮು ರೈಲುಗಳ ಸೇವೆ ಪ್ರಯಾಣಿಕರಿಗೆ ಲಭ್ಯವಾಗಿದೆ. ಆದರೆ, ಕಲಬುರ್ಗಿ- ರಾಯಚೂರು- ಕಲಬುರ್ಗಿ ಡೆಮು ರೈಲನ್ನು ಆರಂಭಿಸಲು ಸೋಲಾಪುರ ರೈಲ್ವೆ ವಿಭಾಗ ನಿರಾಸಕ್ತಿ ತೋರಿ ಕುಂಭಕರ್ಣ ನಿದ್ರೆಗೆ ಜಾರಿದೆ. ಈ ಕುರಿತು ಅಲ್ಲಿನ ಅಧಿಕಾರಿಗೆ ಟ್ವೀಟ್‌ ಮಾಡಿ, ಅದನ್ನು ಕೇಂದ್ರ ವಲಯದ ಪ್ರಧಾನ ವ್ಯವಸ್ಥಾಪಕರು, ನೂತನ ರೈಲ್ವೆ ಸಚಿವರಿಗೆ ಟ್ಯಾಗ್ ಮಾಡಿದ್ದರೂ ಏನೂ ಪ್ರಯೋಜನವಾಗಿಲ್ಲ. ಈ ರೈಲಿನ ಒಂದು ಜೊತೆ ಬೋಗಿಯು ಕಲಬುರ್ಗಿ ರೈಲು ನಿಲ್ದಾಣದ ‘ಕೋಚಿಂಗ್‌ ಸಂಕೀರ್ಣ’ದಲ್ಲಿ ದೂಳು ತಿನ್ನುತ್ತಾ ನಿಂತಿದೆ. ದಯವಿಟ್ಟು ಈ ರೈಲನ್ನು ಪುನರಾರಂಭಿಸ
ಬೇಕು. ಇಲ್ಲವಾದರೆ, ಕಲಬುರ್ಗಿ- ರಾಯಚೂರಿನ ಪ್ರಯಾಣಿಕರು ದುಬಾರಿಯ ರಸ್ತೆ ಪ್ರಯಾಣವನ್ನೇ ಅನಿವಾರ್ಯವಾಗಿ ಆಯ್ಕೆ ಮಾಡಿಕೊಳ್ಳಬೇಕಿದೆ.

– ವೆಂಕಟೇಶ ಮುದಗಲ್,ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT