ಮಂಗಳವಾರ, ಸೆಪ್ಟೆಂಬರ್ 21, 2021
26 °C

ಡೈವೋರ್ಸ್- ಜಗಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಡೈವೋರ್ಸ್ ಆದಮೇಲೆ ಜಗಳ ಆಡಿಕೊಳ್ಳಬಾರದು. ಆಗ ಸಂಸಾರದ ಗುಟ್ಟು ಬಯಲಿಗೆ ಬರುತ್ತದೆ’ ಎಂದು ‘ಮಾಜಿ ದಂಪತಿ’ಯಾದ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರಿಗೆ ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್ ತಿಳಿಹೇಳಿದ್ದಾರೆ.

ಇಲ್ಲಿ ಗಮನಿಸಬೇಕಾದ್ದು ಏನೆಂದರೆ, ಸಾಮಾನ್ಯವಾಗಿ ವಿಚ್ಛೇದಿತರು ಜಗಳವಾಡರು. ವಿಚ್ಛೇದಿತ ಸಂಗಾತಿ ತನ್ನ ಶತ್ರುವನ್ನು (ಕಾಂಗ್ರೆಸ್) ಮದುವೆಯಾಗಿ ಸಂಸಾರ ನಡೆಸುತ್ತಿರುವುದೇ ಮಾಜಿ ಸಂಗಾತಿಯ (ಯಡಿಯೂರಪ್ಪ) ಅಳಲು. ಹಾಗಾಗಿ ಹಾದಿ ಬೀದಿ ರಂಪ ಮಾಡುತ್ತಿದ್ದಾರೆ. ಮರುಮದುವೆಯಾಗಿ ಅಲ್ಲಿಯೂ ಬಾಳಲು ಆಗದಿದ್ದರೆ ಮತ್ತೊಂದು ವಿಚ್ಛೇದನದ ಆಯ್ಕೆ ಇದ್ದೇ ಇದೆ.

ಸದ್ಯಕ್ಕೆ ಸಂಸಾರವಿಲ್ಲದ ಮಾಜಿ ಸಂಗಾತಿ ತನಗಿಲ್ಲವೆಂದು ಕರುಬದೇ ಹೊಸ ದಂಪತಿಗೆ ಸಲಹೆ, ಮಾರ್ಗದರ್ಶನ ನೀಡುತ್ತಾ ಸಂಸಾರ ಚೆನ್ನಾಗಿರಲಿ ಎಂದು ಆಶೀರ್ವದಿಸಲಿ.

–ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು