ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜೆ ಸಿಕ್ಕರೆ ಸಂಭ್ರಮ ಬೇಡ

Last Updated 11 ಜುಲೈ 2022, 19:31 IST
ಅಕ್ಷರ ಗಾತ್ರ

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಇತ್ತೀಚೆಗೆ ಶಾಲಾಕಾಲೇಜುಗಳಿಗೆ ರಜೆ ಘೋಷಿಸಿ
ದ್ದಾರೆ. ಕೆಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಎಡೆಬಿಡದೆ ಸುರಿಯುತ್ತಿರುವ ಕಾರಣ, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ರಜೆ ನೀಡಲಾಗುತ್ತಿದೆ. ಇದರ ಪರಿಣಾಮವಾಗಿ ಮಕ್ಕಳು ಮನೆಗಳಲ್ಲಿ ಕಾಲ ಕಳೆಯುವಂತಾಗಿದೆ. ಆದರೆ ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ರಜೆ ಘೋಷಣೆಯಾದ ಕೂಡಲೇ ಮಕ್ಕಳು, ಯುವಕರ ಸಂಭ್ರಮ ಮುಗಿಲು ಮುಟ್ಟುತ್ತದೆ. ಕೆಲವರಂತೂ ರಜೆ ಸಿಗಲು ಕಾಯುತ್ತಿರುತ್ತಾರೆ. ರಜೆ ಸಿಕ್ಕ ಮೇಲೆ ಅವರ ಖುಷಿ ಇನ್ನೂ ಹೆಚ್ಚಾಗುತ್ತದೆ.

ರಜೆಯ ಸಂಭ್ರಮದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರಿ ಮೀಮ್ಸ್‌ ಬಿಟ್ಟು ಖುಷಿಪಡುವವರಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ಎಷ್ಟೋ ಜನರು ಮಳೆಯಿಂದಾಗಿ ತಮ್ಮ ಮನೆ-ಮಠ, ಆಸ್ತಿ, ಹೊಲ- ತೋಟಗಳ ಹಾನಿಯಿಂದ ನಷ್ಟವನ್ನು ಅನುಭವಿಸುತ್ತಿರುತ್ತಾರೆ ಎಂಬ ಸಂಗತಿ ಅವರ ಅರಿವಿಗೆ ಬರುವುದಿಲ್ಲ. ಹೀಗಾಗಿ, ರಜೆಯ ಕಾರಣಕ್ಕೆ ಸಂಭ್ರಮಪಡದೆ, ಮಳೆಯಿಂದ ಸಂತ್ರಸ್ತರಾದವರು ಹಾಗೂ ತೀವ್ರ ನಷ್ಟ ಅನುಭವಿಸುವವರಿಗೆ ನಮ್ಮ ಕೈಲಾದಷ್ಟು ನೆರವಾಗೋಣ. ಅವರ ಕಷ್ಟಕ್ಕೆ ಸ್ಪಂದಿಸುತ್ತ ಮಾದರಿಯಾಗೋಣ. ಮಕ್ಕಳು ರಜೆಯನ್ನು ಪಠ್ಯಗಳ ಅಧ್ಯಯನ ಹಾಗೂ ಏನನ್ನಾದರೂ ಹೊಸದನ್ನು ಕಲಿಯಲು ಸದುಪಯೋಗ ಪಡಿಸಿಕೊಳ್ಳುವುದು ಒಳ್ಳೆಯದು.

ಶ್ರವಣ್ ಉಪಾಧ್ಯಾಯ,ಧರ್ಮಸ್ಥಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT