ಸೋಮವಾರ, ನವೆಂಬರ್ 30, 2020
23 °C

ರಾಕ್ಷಸ ಆರ್ಥಿಕತೆ: ನಾವು ಮಾಡಬೇಕಾದುದೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪವಿತ್ರ ಆರ್ಥಿಕತೆಯನ್ನು ಅಳವಡಿಸಿಕೊಳ್ಳುವ ಮೂಲಕ ರಾಕ್ಷಸ ಆರ್ಥಿಕತೆಯನ್ನು ಮಣಿಸುವಂತೆ ಒತ್ತಾಯಿಸಿ ರಂಗಕರ್ಮಿ ಪ್ರಸನ್ನ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರ ಆಶಯವು ತಕ್ಷಣದ ಅವಶ್ಯಕತೆಯಾಗಿದೆ. ‘ಇದಕ್ಕೆ ನನ್ನದೂ ಬೆಂಬಲವಿದೆ’ ಎಂದು ಸರಣಿಯಾಗಿ ಹಲವರು ಹೇಳುತ್ತಿದ್ದಾರೆ. ಹಾಗಾದರೆ ಬೆಂಬಲ ಸೂಚಿಸಲು ಸಾಮಾನ್ಯರಾದ ನಾವೇನು ಮಾಡಬಹುದು? ನಾವೇನೂ ಉಪವಾಸ ಮಾಡುವುದು ಬೇಡ. ಮಾರುಕಟ್ಟೆ ತಂತ್ರಗಳಾದ ಜಾಹೀರಾತು, ಪ್ರಚಾರ, ಬಣ್ಣಗಳ ಆಕರ್ಷಣೆಗೆ ಮಾರುಹೋಗದೆ, ನಮ್ಮ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ವಸ್ತುಗಳನ್ನು ಕೊಳ್ಳಬೇಕು. ಇದರಿಂದ ರಾಕ್ಷಸ ಆರ್ಥಿಕತೆ ಅರ್ಧ ಸತ್ತಂತೆ.

ನಮಗೆ ಅಗತ್ಯವಿಲ್ಲದಿದ್ದರೂ ವಸ್ತುಗಳನ್ನು ಕೊಂಡುತಂದು ಮನೆಯಲ್ಲಿ ರಾಶಿ ಹಾಕಿಕೊಳ್ಳುವುದು ರಾಕ್ಷಸ ಆರ್ಥಿಕತೆಯನ್ನು ಪೋಷಿಸಿದಂತೆ. ಈ ರಾಕ್ಷಸ ಆರ್ಥಿಕತೆಯನ್ನು ಸಂಪೂರ್ಣವಾಗಿ ಕೊಲ್ಲಬೇಕೆಂದರೆ, ನೈಸರ್ಗಿಕ ಉತ್ಪನ್ನಗಳ ಬಳಕೆಗೆ ಗಮನ ನೀಡಬೇಕು, ಪರಿಸರ- ಮಾನವ ಸಂಬಂಧದ ಕುರಿತು ಅರಿವುಂಟು ಮಾಡಬೇಕು. ಶಾಲಾ ಪಠ್ಯಪುಸ್ತಕಗಳಲ್ಲಿ ಇದನ್ನು ಅಳವಡಿಸಿ, ನಮ್ಮ ಮುಂದಿನ ಪೀಳಿಗೆ ಕೊಳ್ಳುಬಾಕರಾಗದಂತೆ ತಡೆಯಬೇಕು.

-ದರ್ಶನ್ ಕೆ.ಓ., ದೇವಿಕೆರೆ ಹೊಸೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು