ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃಗಗಳ ಬಗೆಗೇಕೆ ಮೃಗೀಯ ವರ್ತನೆ?

Last Updated 27 ಜೂನ್ 2022, 20:00 IST
ಅಕ್ಷರ ಗಾತ್ರ

ಚಾಮರಾಜನಗರದಿಂದ ತಮಿಳುನಾಡಿನ ಸತ್ಯಮಂಗಲಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಹಾಸನೂರು ಬಳಿ ಎರಡು ಆನೆಗಳು ವಾಹನಗಳ ಮೇಲೆ ದಾಳಿಗೆ ಯತ್ನಿಸಿದ ದೃಶ್ಯಗಳನ್ನು ನೋಡಿ (ಪ್ರ.ವಾ., ಜೂನ್‌ 27) ಮನಸ್ಸಿಗೆ ವ್ಯಥೆಯಾಯಿತು. ಆನೆಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೂಡದೆ ಅವುಗಳಿಗೆ ಅಡ್ಡಲಾಗಿ ವಾಹನಗಳನ್ನು ನಿಲ್ಲಿಸಿ ಅವುಗಳ ಕೋಪವನ್ನು ಕೆರಳಿಸುವುದು, ಸೆಲ್ಫಿ ತೆಗೆದುಕೊಳ್ಳಲು ಮುಂದಾಗುವವರ ವಿರುದ್ದ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.

ಮಾನವನ ಅತಿ ದುರಾಸೆಯಿಂದ ಅರಣ್ಯ ಪ್ರದೇಶ ಆಕ್ರಮಣ, ಕಾಡುಗಳ್ಳತನದಂತಹ ಕೃತ್ಯಗಳಿಂದ ಅರಣ್ಯ ನಾಶವಾಗುತ್ತಿದೆ. ಇದರಿಂದ, ಅರಣ್ಯದಲ್ಲಿ ಸ್ವತಂತ್ರವಾಗಿದ್ದ ಪ್ರಾಣಿಗಳು ಆಹಾರ, ನೀರು ಅರಸಿ ವಲಸೆ ಹೋಗುವ ಪ್ರಸಂಗ ಬಂದಿದೆ. ಸರ್ಕಾರದ ಸೂಚನಾ ಫಲಕಗಳು ಇದ್ದರೂ ಅವನ್ನು ಕಡೆಗಣಿಸಲಾಗುತ್ತಿದೆ. ಜನ ಮೃಗೀಯವಾಗಿ ವರ್ತಿಸದೆ, ಕಾನೂನಿಗೆ ತಲೆಬಾಗಿ ಮನುಷ್ಯತ್ವವನ್ನು ಪಾಲಿಸುವರೇ?

-ರಾ.ಬಾ.ವರದರಾಜನ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT