ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರ ಸಬಲೀಕರಣಕ್ಕೆ ಸಿಗದ ಆದ್ಯತೆ

Last Updated 9 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಚುನಾವಣೆಪೂರ್ವ ಪ್ರಣಾಳಿಕೆಯಲ್ಲಿ ಅಂಗವಿಕಲರಿಗಾಗಿ ಘೋಷಣೆ ಮಾಡಿದ ಆಶ್ವಾಸನೆಗಳನ್ನು ರಾಜ್ಯದ ಈಗಿನ ಸರ್ಕಾರ ತನ್ನ ಎರಡನೇ ಬಜೆಟ್‌ನಲ್ಲಿಯೂ ಸಂಪೂರ್ಣವಾಗಿ ಕಡೆಗಣಿಸಿರುವುದು ಸರ್ಕಾರಕ್ಕೆ ಅಂಗವಿಕಲರ ಮೇಲಿರುವ ಅಸಡ್ಡೆಯನ್ನು ತೋರಿಸುತ್ತದೆ. ಆರ್ಥಿಕ ಸಂಕಷ್ಟದಲ್ಲೂ ಜಾತಿಗೊಂದು ನಿಗಮ ಸ್ಥಾಪನೆಗೆ ಕೋಟ್ಯಂತರ ಹಣ ಮೀಸಲಿಡುವ ಸರ್ಕಾರ, ಅಂಗವಿಕಲರ ಸಬಲೀಕರಣ ಮತ್ತು ಸಾಮಾಜಿಕ ಭದ್ರತೆಗೆ ಒತ್ತು ನೀಡದಿರುವ ಔಚಿತ್ಯವಾದರೂ ಏನು? ಅಂಗವಿಕಲರಿಗೆ ಸಮಾನ ಅವಕಾಶಗಳ ಬಗ್ಗೆ ಶಾಸನ ರಚಿಸಿ ನೀತಿಪಾಠ ಮಾಡುವ ಸರ್ಕಾರ, ಆ ನೀತಿಯನ್ನೇ ಮರೆತಿರುವುದು ಸರಿಯೇ?

–ಚಂದ್ರಶೇಖರ ಪುಟ್ಟಪ್ಪ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT