ಶನಿವಾರ, ನವೆಂಬರ್ 23, 2019
17 °C

ಪ್ರಾಮಾಣಿಕರ ವಿರುದ್ಧ ನಕಲಿ ದೂರು

Published:
Updated:

ಮಧ್ಯಾಹ್ನದ ಬಿಸಿಯೂಟದಲ್ಲಿ ಮಕ್ಕಳಿಗೆ ಚಪಾತಿ ಜೊತೆಗೆ ನೆಂಚಿಕೊಳ್ಳಲು ಪಲ್ಯದ ಬದಲಿಗೆ ಉಪ್ಪನ್ನು ನೀಡಿದ್ದರ ಬಗ್ಗೆ ವಿಡಿಯೊ ಮಾಡಿ ಸತ್ಯವನ್ನು ಬಯಲಿಗೆಳೆದಿದ್ದ ಪತ್ರಕರ್ತನ ವಿರುದ್ಧ ಉತ್ತರಪ್ರದೇಶದ ಮಿರ್ಜಾಪುರ ಪೊಲೀಸರು ಎಫ್‌ಐಆರ್‌ ದಾಖಲಿಸಿರುವುದು (ಪ್ರ.ವಾ., ಸೆ. 4) ಖಂಡನೀಯ.

ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ರವೀಶ್ ಕುಮಾರ್‌ ಅವರು ಹೇಳುವ ಹಾಗೆ, ಇರುವ ಸುದ್ದಿಯನ್ನು ತಿರುಚುವ, ಉತ್ಪ್ರೇಕ್ಷಿಸುವ, ಸುಳ್ಳನ್ನು ನಿಜವೆಂದು ಅತಿರಂಜಿತವಾಗಿ ಬಿತ್ತರಿಸುವ ಕೆಲವು ಮಾಧ್ಯಮಗಳು, ವಾಟ್ಸ್‌ಆ್ಯಪ್ ಯೂನಿವರ್ಸಿಟಿಗಳು ಆಳುವ ಸತ್ತೆಯ ಪರವಾಗಿ ಹಲವು ವರ್ಷಗಳಿಂದಲೂ ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಇಂತಹ ಸ್ಥಿತಿಯಲ್ಲೂ ಪ್ರಾಮಾಣಿಕ ಪತ್ರಕರ್ತರಿಂದ ನೈಜ ಸುದ್ದಿಗಳು ಹೊರಬರುತ್ತಿವೆ. ಆದರೆ ಅಂತಹವರ ವಿರುದ್ಧ ನಕಲಿ ದೂರು ದಾಖಲಿಸಿ ಅವರ ಬಾಯಿ ಮುಚ್ಚಿಸುವುದರ ವಿರುದ್ಧ ಜನಸಾಮಾನ್ಯರು ಈಗಲಾದರೂ ಎಚ್ಚೆತ್ತು ಪ್ರತಿಭಟಿಸಬೇಕು.

ಚಂದ್ರಪ್ರಭ ಕಠಾರಿ, ಬೆಂಗಳೂರು

ಪ್ರತಿಕ್ರಿಯಿಸಿ (+)