ಸಿನಿಮಾ ಬಗ್ಗೆ ಪ್ರೀತಿ, ನಟ–ನಟಿಯರ ಬಗ್ಗೆ ಅಭಿಮಾನ ಇರಿಸಿಕೊಂಡರೆ ತಪ್ಪೇನಿಲ್ಲ. ಆದರೆ ಅದು ವಿಪರೀತಕ್ಕೆ ಹೋಗಬಾರದು. ಚಿಕ್ಕ ಪುಟ್ಟ ವಿಷಯಗಳಿಗೆ ಬೇರೆ ಬೇರೆ ನಟರ ಅಭಿಮಾನಿಗಳ ನಡುವೆ ಕಾದಾಟ ನಡೆಯುವುದು ತರವಲ್ಲ. ‘ದಿ ವಿಲನ್’ ಚಿತ್ರದ ಯಶಸ್ಸಿಗೆ ಪ್ರಾರ್ಥಿಸಿ ಅಭಿಮಾನಿಗಳು ಕೆಲವರು ಕೋಣ, ಕುರಿ ಬಲಿ ಕೊಟ್ಟ ಸುದ್ದಿ ವರದಿಯಾಗಿದೆ (ಪ್ರ.ವಾ., ಅ. 21). ಅದು ಅತಿರೇಕದ ಅಭಿಮಾನ. ಮೌಢ್ಯದ ಪರಮಾವಧಿ.

ಒಂದು ಚಿತ್ರದ ಯಶಸ್ಸಿಗೂ ಪ್ರಾಣಿ ಬಲಿಗೂ ಸಂಬಂಧ ಇದೆಯೇ? ಮುಗ್ಧ ಜೀವಿಗಳನ್ನು ಈ ರೀತಿ ಹಿಂಸಿಸುವುದು ಒಪ್ಪತಕ್ಕ ನಡೆಯಲ್ಲ. ಇಂಥ ವಿಕೃತ ಸಂತೋಷಕ್ಕೆ ಕಡಿವಾಣ ಹಾಕುವುದು ಅಗತ್ಯ. ಅಭಿಮಾನಿಗಳು ಸಮಾಜದ ಒಳಿತಿಗೆ ಏನಾದರೂ ಕಾರ್ಯಕ್ರಮ ಹಮ್ಮಿಕೊಳ್ಳಲಿ. ಆ ಮೂಲಕ ತಾವು ಪ್ರೀತಿಸುವ ನಟನ ಬಗ್ಗೆ ಸಮಾಜದಲ್ಲಿ ಗೌರವ ಹೆಚ್ಚಾಗುವಂತೆ ಮಾಡಲಿ. ಅದನ್ನು ಬಿಟ್ಟು ಈ ರೀತಿ ವರ್ತಿಸುವುದು ಅಭಿಮಾನಿಗಳಿಗೆ ಶೋಭೆ ತರುವುದಿಲ್ಲ.

–ದಾಕ್ಷಿಣಿ ಆರ್., ಮಾಸ್ತಿಕಟ್ಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.