ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿಗೆ ಕಾರಣ ಪತ್ತೆ ಹಚ್ಚಿ

Last Updated 24 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ 300 ಕಾರುಗಳು ಭಸ್ಮವಾಗಿವೆ. ಬಂಡೀಪುರದಲ್ಲಿ ಅಮೂಲ್ಯ ವನ್ಯ ಸಂಪತ್ತು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದೆ (ಪ್ರ.ವಾ.,ಫೆ. 24). ಈ ಎರಡೂ ಪ್ರಕರಣಗಳು ಏಕಕಾಲಕ್ಕೆ ನಡೆದಿರುವುದು ಕಾಕತಾಳೀಯ. ಆದರೆ, ಈ ಪ್ರಕರಣಗಳನ್ನು ಅವಲೋಕಿಸಿದರೆ ಚಿಂತಿಸಬೇಕಾದ ಅಗತ್ಯವಿದೆ ಅನ್ನಿಸುತ್ತದೆ. ಕಾರುಗಳು ಭಸ್ಮವಾಗಿರುವುದಕ್ಕೆ ಕಾರಣ ಇನ್ನಷ್ಟೇ ಬೆಳಕಿಗೆ ಬರಬೇಕಿದೆ.

ಕಾರು ಕಳೆದುಕೊಂಡವರಿಗೆ ವಿಮೆ ದೊರಕಬಹುದು. ಆದರೆ, ಬಂಡೀಪುರದಲ್ಲಿ ಅಮೂಲ್ಯ ವನ್ಯಸಂಪತ್ತು ನಾಶವಾಗಿದ್ದನ್ನು ಬಿಸಿಕೊಡುವವರು ಯಾರು? ಇದರಲ್ಲಿ ಎಷ್ಟೋ ವನ್ಯಜೀವಿಗಳು ಪ್ರಾಣ ಕಳೆದುಕೊಂಡಿರಬಹುದು. ಇದಕ್ಕೆ ಯಾವ ಪರಿಹಾರವಿದೆ? ಕೆಲವು ವರದಿಗಳು ಹೇಳುವಂತೆ, ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯರ ನಡುವಿನ ಸ೦ಘರ್ಷದ ಕಾರಣಕ್ಕೆ ಇದು ನಡೆದಿದ್ದರೆ ನಿಜಕ್ಕೂ ದುರದೃಷ್ಟಕರ. ಈ ಎರಡು ಪ್ರಕರಣಗಳಿಗೂ ಮೂಲ ಕಾರಣವನ್ನು ಆದಷ್ಟು ಬೇಗ ಪತ್ತೆ ಮಾಡಿ, ಮುಂದೆ ಇಂತಹವು ಘಟಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT