ಗುರುವಾರ , ಡಿಸೆಂಬರ್ 5, 2019
19 °C

ವಂಚನೆ ಪ್ರಕರಣಗಳು ಪಾಠ ಕಲಿಸುತ್ತಿಲ್ಲ

Published:
Updated:

ವ್ಯಕ್ತಿಯೊಬ್ಬರಿಗೆ ಆಮಿಷವೊಡ್ಡಿ ₹ 65 ಲಕ್ಷ ವಂಚಿಸಲಾಗಿದೆ (ಪ್ರ.ವಾ., ಆ. 27). ಚಾರ್ಟರ್ಡ್‌ ಅಕೌಂಟೆಂಟ್ ಆಗಿರುವ ಯುವತಿಯೊಬ್ಬರು ಜ್ಯೋತಿಷಿಯೊಬ್ಬನಿಂದ ₹ 30 ಲಕ್ಷ ಮೋಸಹೋಗಿದ್ದು ಇತ್ತೀಚೆಗಷ್ಟೇ ವರದಿಯಾಗಿತ್ತು. ಬೃಹತ್ ಪ್ರಮಾಣದಲ್ಲಿ ನಡೆದ ಐಎಂಎ ವಂಚನೆ ಹಗರಣ ಇನ್ನೂ ಕಣ್ಣಮುಂದೆಯೇ ಇದೆ. ಇಷ್ಟಾದರೂ ಜನ ಎಚ್ಚೆತ್ತುಕೊಳ್ಳದೇ ಇರುವುದು ದುರಂತವೇ ಸರಿ. ಅದರಲ್ಲೂ ಬಹುತೇಕ ವಿದ್ಯಾವಂತರೇ ಇಂತಹವುಗಳಿಗೆ ಬಲಿಯಾಗುತ್ತಿರುವುದನ್ನು ನೋಡಿದರೆ, ಅದಕ್ಕೆ ದುರಾಸೆಯೇ ಕಾರಣ ಎನಿಸುತ್ತದೆ. ಶೀಘ್ರವಾಗಿ ಹಣ ಮಾಡಿಕೊಳ್ಳುವ ಧಾವಂತಕ್ಕೆ ಬಲಿಯಾಗದೆ, ಪಾಲಿಗೆ ಬಂದದ್ದು ಪಂಚಾಮೃತ ಎಂದು ಭಾವಿಸಿದರೆ ಇಂಥ ವಂಚನೆಗಳು ಕಡಿಮೆಯಾದಾವು.

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು