ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಣಿ ದುರಂತ: ದುರ್ದೈವವಲ್ಲ, ನಿರ್ಲಕ್ಷ್ಯ

Last Updated 18 ಸೆಪ್ಟೆಂಬರ್ 2019, 6:30 IST
ಅಕ್ಷರ ಗಾತ್ರ

ಆಂಧ್ರಪ್ರದೇಶದಲ್ಲಿ ಪ್ರವಾಸಿಗರಿದ್ದ ದೋಣಿ ಮುಳುಗಿ, ಹಲವರು ಜಲಸಮಾಧಿಯಾಗಿರುವುದನ್ನು ದುರ್ದೈವ ಎನ್ನುವುದಕ್ಕಿಂತ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಇದು ಸಂಭವಿಸಿದೆ ಎಂದರೆ ತಪ್ಪಾಗಲಾರದು. ಪರವಾನಗಿ ಇಲ್ಲದ ದೋಣಿಗಳನ್ನು ಅವರು ಹೇಗೆ ಸೇವೆಗೆ ಒದಗಿಸಿದರು? ದೋಣಿಯನ್ನು ನಿರ್ವಹಿಸುವ ಸಿಬ್ಬಂದಿಯು ಕೌಶಲ ತರಬೇತಿ ಪಡೆದಿರುವ ಬಗ್ಗೆ ಅನುಮಾನವಿದೆ. ನಿಗದಿತ ಸಂಖ್ಯೆಗಿಂತ ಹೆಚ್ಚಿನ ಜನರನ್ನು ದೋಣಿಯಲ್ಲಿ ತುಂಬಿಸಿದ್ದು ಇದಕ್ಕೆ ಕಾರಣ ಇರಬಹುದು.

ನಮ್ಮ ರಾಜ್ಯದ ನದಿಗಳಲ್ಲೂ ದೋಣಿ, ತೆಪ್ಪ ಮುಳುಗಿ ಜನರು ಸಾವನ್ನಪ್ಪಿದ ದುರಂತಗಳು ನಡೆದಿವೆ. ಕೆಲವು
ಪ್ರದೇಶಗಳಲ್ಲಿ ಜನರು ಸಂಚಾರಕ್ಕಾಗಿ ದೋಣಿ, ತೆಪ್ಪಗಳನ್ನೇ ಅವಲಂಬಿಸಬೇಕಾದ ಅನಿವಾರ್ಯ ಇದೆ. ಮಳೆಗಾಲದಲ್ಲಿ ನದಿಯ ನೀರಿನ ಹರಿವಿನ ಪ್ರಮಾಣ ಹೆಚ್ಚಾಗುವುದು ಇದಕ್ಕೊಂದು ಕಾರಣವಿರಬಹುದು. ಇಂತಹ ಸಂದರ್ಭಗಳಲ್ಲಿ ಸರ್ಕಾರವು ಸ್ಥಳೀಯ ಪಂಚಾಯಿತಿಗಳ ಮೂಲಕ ಜೀವರಕ್ಷಕ ಸಾಧನಗಳನ್ನು ಒದಗಿಸಿ, ದೋಣಿ ಮತ್ತು ತೆಪ್ಪಗಳನ್ನು ನಡೆಸುವವರು ಸುರಕ್ಷಾ ಕ್ರಮಗಳನ್ನು ಪಾಲಿಸುವಂತೆ ನೋಡಿಕೊಳ್ಳಬೇಕು.

– ಆರ್.ಟಿ.ವೆಂಕಟೇಶ್ ಬಾಬು,ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT