ಬುಧವಾರ, ಆಗಸ್ಟ್ 17, 2022
25 °C

ಜಂಗಮಗೊಳ್ಳಲಿ ಮಹಾಮಹಿಮರ ವ್ಯಕ್ತಿತ್ವ

ವಾಚಕರವಾಣಿ Updated:

ಅಕ್ಷರ ಗಾತ್ರ : | |

ಚಿಕ್ಕವರಿದ್ದಾಗ ನಾವು ಆಡುತ್ತಿದ್ದ ಆಟಗಳಲ್ಲಿ ‘ಸ್ಟ್ಯಾಚು’ ಎಂಬ, ಸಂಪನ್ಮೂಲಗಳ ಅಗತ್ಯವಿಲ್ಲದೆ ಸರಳವಾಗಿ ಆಡುತ್ತಿದ್ದ ಆಟವೂ ಒಂದಾಗಿತ್ತು. ಯಾರೂ ಸ್ವಇಚ್ಛೆಯಿಂದ ಪ್ರತಿಮೆಯಾಗಲು ಬಯಸುವುದಿಲ್ಲ ಎಂಬುದನ್ನು ಈ ಆಟ ಒಂದು ರೀತಿಯಲ್ಲಿ ನಮಗೆ ಕಲಿಸುತ್ತದೆ. ಆಟಗಾರರಲ್ಲಿ ಪ್ರತಿಯೊಬ್ಬರೂ ಕ್ರಿಯಾತ್ಮಕತೆಯನ್ನು ಕಾಯ್ದುಕೊಳ್ಳಲು ಬಯಸುತ್ತಾರೆ. ಹಾಗೇ ಅನೇಕ ಮಹಾತ್ಮರ ವ್ಯಕ್ತಿತ್ವವನ್ನು ನಾವು ಚಲನಶೀಲಗೊಳಿಸಬೇಕು. ಆದರೆ ಅವರ ಬೃಹತ್‌ ಪ್ರತಿಮೆಯನ್ನು ಸ್ಥಾಪಿಸಿ, ಗೌರವ ಸಲ್ಲಿಸುವ ನಮ್ಮ ಪ್ರಯತ್ನವನ್ನು ಸ್ಥಾವರಗಳಿಗೆ ಸೀಮಿತಗೊಳಿಸುತ್ತಿದ್ದೇವೆ.

ಗಾಂಧೀಜಿ, ಅಂಬೇಡ್ಕರ್ ಅಂತಹವರ ವಿಚಾರದಲ್ಲಿ ನಮ್ಮ ಪ್ರಭುತ್ವ ಮಾಡಿದ ತಪ್ಪು ಕೂಡ ಇದೇ. ದೇಶದಾದ್ಯಂತ ಇಂತಹ ಮಹಾತ್ಮರ ಪ್ರತಿಮೆಗಳನ್ನು ಅದು ಸ್ಥಾಪಿಸಿತೇ ವಿನಾ ಅವರ ಆಶಯಗಳನ್ನು, ವಿಚಾರಗಳನ್ನು ಜನಸಮೂಹಕ್ಕೆ ಮನದಟ್ಟು ಮಾಡಿಸುವಲ್ಲಿ ವಿಫಲವಾಯಿತು. ನಮ್ಮ ನಡುವೆ ಇರುವ ಸಾವಿರಾರು ಮಹಾಪುರುಷರ ಚಾರಿತ್ರ್ಯವನ್ನು ತಿಳಿಸಲು ಪ್ರತಿಮೆಗಳನ್ನು ನಿರ್ಮಿಸುವುದಕ್ಕಿಂತ ಅವರ ವ್ಯಕ್ತಿತ್ವವನ್ನು ಜಂಗಮಗೊಳಿಸುವ ಅನಿವಾರ್ಯ ಇದೆ.

ಪ್ರವೀಣ ನಾಗಪ್ಪ ಯಲವಿಗಿ, ಹಾವೇರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.