ಬುಧವಾರ, ಡಿಸೆಂಬರ್ 8, 2021
18 °C

ಗುಂಡ್ಲು ನದಿ: ಅನಿವಾರ್ಯ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಮಾರು 70, 80ರ ದಶಕದಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ಅಸ್ಮಿತೆಯಂತೆ, ಅಲ್ಲಿನ ಜನರಿಗೆ ಜೀವನದಿಯಂತೆ ಇದ್ದ ಗುಂಡ್ಲು ನದಿಯ ಹುಟ್ಟಿನ ಜಾಡು ಹಾಗೂ ಅದು ಹರಿದು ಬರುತ್ತಿದ್ದ ಮಾರ್ಗ ಇಂದು ಮಾನವರ ದುರಾಸೆಯ ಫಲವಾಗಿ ಕಣ್ಮರೆಯಾಗಿವೆ. ಅದರ ಪರಿಣಾಮವಾಗಿ ತಾಲ್ಲೂಕಿನ ಜನತೆ ಹನಿ ಹನಿ ನೀರಿಗೂ ಪರಿತಪಿಸುವಂತಾಗಿದೆ. ಇಂತಹ ಜೀವನದಿಯ ಜೀವಂತಿಕೆಗಾಗಿ ತಾಲ್ಲೂಕಿನ ಕೆಲವು ಜನಪರ ಚಿಂತಕರು ‘ಗುಂಡ್ಲು ನದಿ ಅಭಿಯಾನ’ವನ್ನು ಆರಂಭಿಸಿದ್ದು, ಇದಕ್ಕೆ ಸ್ಥಳೀಯರೆಲ್ಲ ಒಗ್ಗಟ್ಟಿನಿಂದ ಕೈ ಜೋಡಿಸುವುದು ಅನಿವಾರ್ಯವಾಗಿದೆ.

ತಾಲ್ಲೂಕಿನಲ್ಲಿರುವ ಹಲವಾರು ಹಳ್ಳಿಗಳ ಲಕ್ಷಾಂತರ ಜನರಿಗೆ ಮಳೆಯಾದರಷ್ಟೇ ಬೆಳೆ, ಇಲ್ಲವಾದಲ್ಲಿ ಇಲ್ಲ. ಮತ್ತೊಂದು ಕಡೆ, ಬೇಸಿಗೆಯ ಕಾಲದಲ್ಲಂತೂ ತಾಲ್ಲೂಕಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನೀರಿಗಾಗಿ ಭಾರಿ ಹಾಹಾಕಾರ ಶುರುವಾಗಿ ಬಿಡುತ್ತದೆ.‌ ಕುಡಿಯುವ ನೀರು ತರಲು ಜನ ಕಿಲೊಮೀಟರ್‌ಗಟ್ಟಲೆ ಅಲೆಯಬೇಕಾಗುತ್ತದೆ. ಇದು ಹೀಗೇ ಮುಂದುವರಿದರೆ ತಾಲ್ಲೂಕಿನ ಜನರ ಗತಿ ಅಧೋಗತಿಯಾಗುತ್ತದೆ ಎಂದು ಮನಗಂಡು, ಗುಂಡ್ಲು ನದಿಯ ಉಳಿವಿಗಾಗಿ ಅಭಿಯಾನ ಆರಂಭಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ರಾಘವೇಂದ್ರ ಅಪುರಾ, ಅಗತಗೌಡನಹಳ್ಳಿ, ಗುಂಡ್ಲುಪೇಟೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು