ಶುಕ್ರವಾರ, ಏಪ್ರಿಲ್ 10, 2020
19 °C

ಹಲ್ಮಿಡಿ ಗ್ರಾಮ: ಅಲಕ್ಷ್ಯ ಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡದ ಮೊದಲ ಶಾಸನ ಸಿಕ್ಕ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹಲ್ಮಿಡಿ ಗ್ರಾಮಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದೆ. ಅಲ್ಲಿ ಸಿಕ್ಕ ಮೂಲ ಶಾಸನವನ್ನು ಬೆಂಗಳೂರಿನ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಸ್ಥಳಾಂತರಿಸಲಾಗಿದ್ದು, ಅದರ ಸ್ಮಾರಕವಾಗಿ ಅಲ್ಲಿ ಪ್ರತಿಕೃತಿಯನ್ನು ಸ್ಥಾಪಿಸಲಾಗಿದೆ.

ಹಾಸನ- ಚಿಕ್ಕಮಗಳೂರು ಹೆದ್ದಾರಿಯಲ್ಲಿ, ಬೇಲೂರು ಮತ್ತು ಚಿಕ್ಕಮಗಳೂರಿನ ಮಧ್ಯೆ ಇರುವ ಹೆದ್ದಾರಿಯಿಂದ 4 ಕಿ.ಮೀ. ಒಳಗೆ ಇರುವ ಹಲ್ಮಿಡಿಗೆ ಹೋಗುವ ರಸ್ತೆ ಪ್ರವೇಶ ದ್ವಾರದಲ್ಲಿ ದೊಡ್ಡ ಕಮಾನು ಇದೆ. ಆದರೂ ಮಧ್ಯೆ ಮಧ್ಯೆ ಮಾರ್ಗಸೂಚಿ ಫಲಕಗಳಿಲ್ಲ. ಹಲ್ಮಿಡಿ ಊರಿನಲ್ಲಿಯೂ ಶಿಲಾಶಾಸನ ಇರುವ ಸ್ಥಳದ ಬಗ್ಗೆ ಸೂಚನಾ ಫಲಕಗಳಿಲ್ಲ.

ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಯತ್ನದಿಂದ ಶಿಲಾಶಾಸನದ ಪ್ರತಿಕೃತಿ ಮತ್ತು ಇತರ ಶಿಲ್ಪಗಳನ್ನು ಜತನವಾಗಿ ಕಾಯ್ದಿಡಲಾಗಿದೆ. ಅಲ್ಲಿಂದ ಅಂಬಲಿ ಮಾರ್ಗವಾಗಿ ಚಿಕ್ಕಮಗಳೂರು ಬರೀ ಹತ್ತು ಕಿ.ಮೀ. ದೂರ ಇದ್ದರೂ ರಸ್ತೆ ತೀರಾ ಹದಗೆಟ್ಟಿರುವುದರಿಂದ ಅಲ್ಲಿಗೆ ತಲುಪಲು ಕನಿಷ್ಠ ಅರ್ಧ ಗಂಟೆ ಬೇಕಾಗುತ್ತದೆ.

ಕಾರಿನಲ್ಲಿ ಹೋಗುವುದಿರಲಿ ದ್ವಿಚಕ್ರ ವಾಹನದಲ್ಲಿ ಹೋಗುವುದೂ ದುಸ್ತರ. ಇತಿಹಾಸ ಪ್ರಸಿದ್ಧ ಹಲ್ಮಿಡಿ ಸಂಪರ್ಕ ರಸ್ತೆಯ ಈ ಶೋಚನೀಯ ಸ್ಥಿತಿ ದುರದೃಷ್ಟಕರ. ಸಂಬಂಧಿಸಿದ ಇಲಾಖೆ ಕೂಡಲೇ ಇತ್ತ ಗಮನಹರಿಸಿ ಈ ನ್ಯೂನತೆ ಸರಿಪಡಿಸಬೇಕು.

-ಪ್ರೊ. ಎಸ್.ಬಿ.ರಂಗನಾಥ್‌, ಸಿರಿಗೆರೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು