ಶುಕ್ರವಾರ, ಮಾರ್ಚ್ 31, 2023
22 °C

ವಾಚಕರ ವಾಣಿ: ಭಿನ್ನಾಭಿಪ್ರಾಯ ಬಗೆಹರಿಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಬೆಂಬಲಿಗರು, ಅಭಿಮಾನಿಗಳ ಬಳಗ ಹಾಗೂ ಜನಸಾಹಿತ್ಯ ಸಮ್ಮೇಳನದ ಬೆಂಬಲಿಗರು, ಅಭಿಮಾನಿಗಳ ನಡುವೆ, ಪತ್ರಿಕೆಗಳ ಮೂಲಕ ನಡೆಯುತ್ತಿರುವ ಪರಸ್ಪರ ಕೆಸರೆರಚಾಟವು ಸಾರ್ವಜನಿಕ ನಲ್ಲಿ ಬಳಿಯ ಜಗಳ, ಕಚ್ಚಾಟದ ಮಟ್ಟವನ್ನು ತಲುಪಿದೆ. ಇದು ಜನರಿಗೆ ಪುಕ್ಕಟೆ ಮನರಂಜನೆ ಒದಗಿಸುತ್ತಿದೆಯೇ ವಿನಾ ಕನ್ನಡ ನಾಡು-ನುಡಿಯ ಹಿತಸಾಧನೆಯ ದೃಷ್ಟಿಯಿಂದ ಹೆಚ್ಚಿನದ್ದೇನನ್ನೂ ಸಾಧಿಸುತ್ತಿಲ್ಲ. ಈ ಬೆಳವಣಿಗೆ ಇವರೆಲ್ಲರ ಅಮೂಲ್ಯವಾದ ಸಮಯ ಮತ್ತು ಸಂಪನ್ಮೂಲಗಳ ಅಪವ್ಯಯಕ್ಕೆ ಕಾರಣವಾಗಿರುವುದು ಅತ್ಯಂತ ಆತಂಕಕಾರಿ ವಿಚಾರ. ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜಕರು ಹಾಗೂ ಜನಸಾಹಿತ್ಯ ಸಮ್ಮೇಳನದ ಆಯೋಜಕರು ಒಂದೆಡೆ ಕಲೆತು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಬಾರದೇ? ಕನ್ನಡದ ನುಡಿ ತೇರನ್ನು ಎಳೆಯಲಾಗದೇ? ಎಳೆಯಬಾರದೇ?

-ಡಾ. ಎಂ.ರವೀಂದ್ರ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು