ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಮತ ಇದೆಯೇ?

Last Updated 10 ಡಿಸೆಂಬರ್ 2018, 20:16 IST
ಅಕ್ಷರ ಗಾತ್ರ

ದೇಶದಲ್ಲಿ ವಿವಿಧ ಜಾತಿಗಳ ಸಂಘಟನೆ ನಡೆಯುವಾಗ ಬ್ರಾಹ್ಮಣ ಜಾತಿಯ ಸಂಘಟನೆ, ಅದಕ್ಕೆ ಸಂಬಂಧಿಸಿದಂತೆ ಪ್ರಚಾರ, ಹಕ್ಕೊತ್ತಾಯ, ರಾಜಕಾರಣ ಇವೆಲ್ಲವೂ ಕಂಡು ಬರುತ್ತಿರಲಿಲ್ಲ. ಇತ್ತೀಚೆಗೆ ಆ ಜಾತಿಯ ಸಂಘಟನೆ, ಪ್ರಚಾರ ಮುಂತಾದವು ಸಹ ನಡೆಯುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.

ಮೈಸೂರಿನಲ್ಲಿ ಡಿಸೆಂಬರ್ 15, 16 ರಂದು ನಡೆಯಲಿರುವ ಬ್ರಾಹ್ಮಣ ಸಮಾವೇಶದ ಪ್ರಚಾರ ಬಿರುಸಿನಿಂದ ನಡೆದಿದೆ. ಪೇಜಾವರ ಶ್ರೀಗಳು ‘ಹಿಂದೂ ಮತ’ ಎಂಬುದು ವಾಸ್ತವ ಎಂದು ನಂಬಿದ್ದಾರೆ. ವೈದಿಕರು ವೈದಿಕ ಮತವನ್ನು ಅನುಸರಿಸುತ್ತಾರೆಂಬುದು ಜನರ ಭಾವನೆ. ಈಗ ಬ್ರಾಹ್ಮಣ ಜಾತಿಯವರು ತಮ್ಮ ಅಸ್ತಿತ್ವವನ್ನು ತೋರಿಸುತ್ತಿದ್ದಾರೆ. ‘ನಾವೆಲ್ಲ ಒಂದು ನಾವೆಲ್ಲ ಹಿಂದೂ’ ಎಂಬುದು ಘೋಷಣೆ ಮಾತ್ರವಾಗಿದೆ. ಯಾರನ್ನಾದರೂ ಮಾತನಾಡಿಸಿದರೆ ನಾನು ಬ್ರಾಹ್ಮಣ, ನಾನು ಲಿಂಗಾಯತ, ನಾನು ಕುರುಬ ಇತ್ಯಾದಿ ಉತ್ತರ ಬರುತ್ತದೆಯೇ ವಿನಾ ‘ನಾನು ಹಿಂದೂ’ ಎಂಬ ಉತ್ತರ ಬರುವುದಿಲ್ಲ. ಇತರರು ನಾನು ಜೈನ, ನಾನು ಸಿಖ್, ನಾನು ಮುಸಲ್ಮಾನ, ನಾನು ಕ್ರೈಸ್ತ ಎನ್ನುತ್ತಾರೆ. ಹೀಗಿರುವಾಗ ಪೇಜಾವರರಂಥವರು ‘ಹಿಂದೂ ಮತ ಇದೆ’ ಎಂದು ಹೇಗೆ ಹೇಳುತ್ತಾರೆ?

ಪ್ರತೀ ಜಾತಿಯೂ ತನ್ನದೇ ಆದ ಮಠ, ಜಗದ್ಗುರುವನ್ನು ಹೊಂದಿದ್ದು, ಸಮಾನಾಂತರದಲ್ಲಿ ಸಾಗುತ್ತಿದೆ. ಹಿಂದಿನಿಂದಲೂ ಜಾತಿಗಳನ್ನು ಬಿಡಿಸಿ, ಹಿಂದೂ ಮತವನ್ನು ರೂಪಿಸಲಿಲ್ಲ. ಕೆಲವು ಜಾತಿಯವರು ಬಹಿರಂಗವಾಗಿ ನಾವು ಹಿಂದೂ ಮತಕ್ಕೆ (ಇಲ್ಲದ) ಸೇರಿಲ್ಲ ಎನ್ನುತ್ತಾರೆ. ಜನರನ್ನು ವಿಭಾಗಿಸುವುದನ್ನು ಬಿಟ್ಟು ‘ನಾವೆಲ್ಲ ಒಂದು’ ಎಂಬುದು ಬರುತ್ತದೆಯೇ. ಆರೆಸ್ಸೆಸ್ ಈ ಕೆಲಸ ಮಾಡುತ್ತದೆಯೇ? ‘ಬಹುತ್ವದಲ್ಲಿ ಏಕತ್ವ’ ಎಂಬುದು ಮತಗಳ ಬಗ್ಗೆ ಹೇಳುವ ಮಾತು. ಜಾತಿಗಳ ಬಗ್ಗೆ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT