ಬುಧವಾರ, ಮೇ 12, 2021
26 °C

ಕ್ರಿಕೆಟ್‌ನಿಂದ ಲಾಭ ಪಡೆಯುವ ಹುನ್ನಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಆಟದ ಆಸ್ವಾದ ಕಿಮ್ಮತ್ತು ಪಡೆಯಲಿ’ ಎಂಬ ಪ್ರೊ. ಅಬ್ದುಲ್ ರೆಹಮಾನ್ ಪಾಷ ಅವರ ಲೇಖನ (ಸಂಗತ, ಜೂನ್‌ 19) ಪ್ರಬುದ್ಧವಾಗಿದೆ. ಭಾರತ– ಪಾಕಿಸ್ತಾನದ  ನಡುವೆ ಬಹಳಷ್ಟು ವಿಚಾರಗಳಲ್ಲಿ ವಿವಾದಗಳಿವೆ, ನಿಜ. ಪಾಕಿಸ್ತಾನವು ತನಗೆ ಸಂಬಂಧವಿಲ್ಲದ ಕಾಶ್ಮೀರದ ವಿಚಾರದಲ್ಲಿ ತಲೆಹಾಕಿ, ಧರ್ಮಾಂಧರ ಮೂಲಕ ಭಾರತಕ್ಕೆ ಬಹಳಷ್ಟು ಹಾನಿ ಉಂಟುಮಾಡಿದೆ. ಭಾರತದಿಂದ ಅದಕ್ಕೆ ತಕ್ಕ ಉತ್ತರ ಪಡೆದಿದ್ದರೂ ಇಂತಹ ಕುತ್ಸಿತ ಬುದ್ಧಿಯನ್ನು ಅದು ಬಿಟ್ಟಿಲ್ಲ. ಆದರೆ, ಕ್ರಿಕೆಟ್ ವಿಷಯದಲ್ಲಿ ಇದನ್ನೇ ಬಂಡವಾಳ ಮಾಡಿಕೊಳ್ಳುವ ಹುನ್ನಾರಗಳನ್ನು ವ್ಯಾಪಾರೀ ಮನಸ್ಸುಗಳು ಮಾಡುತ್ತಲೇ ಬಂದಿವೆ. ಕೋಟ್ಯಂತರ ಜನರ ಆಸಕ್ತಿ ಕೆರಳಿಸುವ ಆಟ ಕ್ರಿಕೆಟ್. ಜಾಹೀರಾತು ಜಗತ್ತು ಅದನ್ನು ಬಳಸಿಕೊಳ್ಳದೆ ಸುಮ್ಮನಿರುವುದೇ?

ಚುನಾವಣೆ ಹಾಗೂ ಕ್ರಿಕೆಟ್‌ ಅನ್ನು ರಾಜಕಾರಣಿಗಳು, ಉದ್ಯಮಿಗಳು ಬಳಸಿಕೊಂಡು ಜನರ ಕಣ್ಣಿಗೆ ಮಣ್ಣೆರಚುವುದು ನಡೆದೇ ಇದೆ. ಎರಡೂ ದೇಶಗಳ ಜನಸಾಮಾನ್ಯರಿಗೆ ಸಂಘರ್ಷ ಬೇಕಿಲ್ಲ. ಆದರೆ  ಮೂಲಭೂತವಾದಿಗಳು ಅವರನ್ನು ಸುಮ್ಮನೆ ಇರಗೊಡುವರೇ? ಜನರ ತೆರಿಗೆ ಹಣವು ಶಸ್ತ್ರಾಸ್ತ್ರ ಮಾರುವ ದೇಶಗಳ ಖಜಾನೆ ಸೇರುತ್ತಿದೆ. 

–ಆಶಿಹಾಳ ತಿರುಪತಿ, ಹೊಸನಗರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು