ಸೋಮವಾರ, ಮೇ 16, 2022
30 °C

ವಾಚಕರ ವಾಣಿ: ಗೃಹಿಣಿಯರ ಪಾಲಿಗೆ ಆಶಾದಾಯಕ ಬೆಳವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮತ ಬೇಟೆಗೆ ಹೊಸ ಅಸ್ತ್ರ’ ಎಂಬ ಡಾ. ಗೀತಾ ಕೃಷ್ಣಮೂರ್ತಿ ಅವರ ಲೇಖನ (ಪ್ರ.ವಾ., ಫೆ. 10) ಮಾರ್ಮಿಕವಾಗಿ ಮೂಡಿಬಂದಿದೆ. ತಮಿಳುನಾಡಿನ ಹೊಸ ರಾಜಕೀಯ ಪಕ್ಷವೊಂದು ಮಹಿಳೆಯರು ಮಾಡುವ ಮನೆಗೆಲಸವನ್ನು ಮೌಲ್ಯೀಕರಿಸಿ ಅದಕ್ಕೆ ವೇತನ ನೀಡುವ ಭರವಸೆಯನ್ನು ಇತ್ತೀಚೆಗೆ ತನ್ನ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿರುವ ವಿಚಾರದ ಬಗ್ಗೆ ಹಾಗೂ ಅದು ಉಂಟು ಮಾಡಬಹುದಾದ ದೂರಗಾಮಿ ಪರಿಣಾಮಗಳ ಬಗ್ಗೆ ಅವರು ವಸ್ತುನಿಷ್ಠವಾಗಿ ಚರ್ಚಿಸಿದ್ದಾರೆ. ತನ್ನ ಬಗ್ಗೆ ಚಿಂತಿಸದೆ ಸದಾಕಾಲ ತನ್ನ ಕುಟುಂಬಕ್ಕಾಗಿ ಗಾಣದೆತ್ತಿನಂತೆ ದುಡಿಯುವ ಗೃಹಿಣಿಯರ ಪಾಲಿಗೆ ಇದು ಆಶಾದಾಯಕ ಬೆಳವಣಿಗೆ. ಆದರೆ, ಇದರಲ್ಲೂ ಹಲವಾರು ಸಮಸ್ಯೆಗಳಿವೆ.

ಉದ್ಯೋಗಸ್ಥ ಮಹಿಳೆಗೆ ಮಣೆ ಹಾಕುವ ನಮ್ಮ ಸಮಾಜ, ಗೃಹಕೃತ್ಯವೆಸಗುವ ಗೃಹಿಣಿಯರನ್ನು ಕಡೆಗಣಿಸು ತ್ತದೆ. ಅವರನ್ನು ಗೌರವದಿಂದ ಕಾಣುವಂತಹ ವಾತಾವರಣ ಇನ್ನು ಮುಂದಾದರೂ ನಿರ್ಮಾಣವಾಗಬೇಕು. ಗೃಹಕೃತ್ಯದಿಂದ ಹೈರಾಣಾದ ಮಹಿಳೆ ತನ್ನ ಆರ್ಥಿಕ ಅವಲಂಬನೆಯಿಂದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಅವಕಾಶಗಳಿಂದ ವಂಚಿತಳಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ಅವಳಿಗೆ ಕೊಡುವ ವೇತನ ಅವಳಿಗೆ ಹೆಚ್ಚಿನ ಗೌರವ ವನ್ನು, ಸಮಾನತೆಯನ್ನು ಮತ್ತು ಸ್ವಾತಂತ್ರ್ಯವನ್ನು ತಂದುಕೊಟ್ಟರೆ ಅದಕ್ಕಿಂತ ಹೆಚ್ಚಿನದೇನೂ ಅವಳಿಗೆ ಬೇಕಾಗಿಲ್ಲ. ಆದರೆ, ಪುರುಷಪ್ರಧಾನ ಸಮಾಜದಲ್ಲಿ ಇದು ಸಾಧ್ಯವೇ?

-ವೀಣಾ ಸುಬ್ರಹ್ಮಣ್ಯ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು