ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ: ಅಳಿಸಲಾಗದ ಶಾಯಿ, ಕಳಂಕ ಮೆತ್ತದಿರಲಿ

Last Updated 14 ಜನವರಿ 2022, 19:30 IST
ಅಕ್ಷರ ಗಾತ್ರ

ಪ್ರತೀ ಚುನಾವಣೆಯಲ್ಲಿ ಬಳಸುವಷ್ಟು ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡಿರುವ ಅಳಿಸಲಾಗದ ಶಾಯಿ (ಇಂಡೆಲಿಬಲ್ ಇಂಕ್) ಮೈಸೂರಿನ ‘ಅರಗು ಮತ್ತು ಬಣ್ಣ’ ಕಾರ್ಖಾನೆಯಲ್ಲಿ ತಯಾರಾಗುವುದು ಕರ್ನಾಟಕಕ್ಕೂ ಹೆಮ್ಮೆಯ ವಿಷಯವೇ. ಈ ಸಂಗತಿಯನ್ನು ತಿಳಿಸುವ ಸುದ್ದಿಯಲ್ಲಿ ಒಂದು ಆತಂಕಕಾರಿ ಅಂಶವೂ ಇದೆ. ಸುದ್ದಿಗೆ ಪೂರಕವಾಗಿ ಮಾಧ್ಯಮದಲ್ಲಿ ಮುದ್ರಿಸಿರುವ ಚಿತ್ರವನ್ನು ನೋಡಿದರೆ, ಅಳಿಸಲಾಗದ ಶಾಯಿಯನ್ನು ತುಂಬಿಸುವ ಬಾಟಲಿಯ ಬಣ್ಣ ಕೇಸರಿ ಬಣ್ಣದಲ್ಲಿರುವಂತೆ ತೋರುತ್ತದೆ. ಇದು ನಿಜವೇ ಆಗಿದ್ದರೆ, ಮುಂಬರುವ ಚುನಾವಣೆಗಳಲ್ಲಿ ಬಳಸಲಾಗುವ ಈ ಬಾಟಲಿಯ ಬಣ್ಣವು ಸಂಘ ಪರಿವಾರ ಮತ್ತು ಅದರ ರಾಜಕೀಯ ಅಂಗದ ವಿವಿಧ ಲಾಂಛನಗಳ ನಿರ್ದಿಷ್ಟ ಬಣ್ಣವಾಗಿರುವುದರಿಂದ, ಅದು ಆ ಪಕ್ಷವು ಚುನಾವಣಾ ನೀತಿ-ನಿಯಮಗಳನ್ನು ಉಲ್ಲಂಘಿಸುವ, ಚುನಾವಣಾ ಭ್ರಷ್ಟಾಚಾರದ ಆಪಾದನೆಗಳನ್ನು ಹೊರಲು ಕಾರಣವಾಗಬಹುದು.

ಈಗಾಗಲೇ ಭಾರತದ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗವು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಅನುಕೂಲಕರವಾದ ಪಕ್ಷಪಾತದ ಕ್ರಮಗಳನ್ನು ಅನುಸರಿಸುತ್ತಿದೆಯೆಂಬ ಆಪಾದನೆಗಳನ್ನು ಎದುರಿಸುತ್ತಿದೆ. ಕೇಸರಿ ಬಣ್ಣವು ಭಾರತದ ರಾಷ್ಟ್ರೀಯ ಧ್ವಜದ ಬಣ್ಣಗಳಲ್ಲಿ ಒಂದೆಂದೂ, ಆದ್ದರಿಂದ ಆಕ್ಷೇಪಾರ್ಹವಲ್ಲವೆಂಬ ಮಾಮೂಲು ಸಮರ್ಥನೆ, ನಿರಾಕರಣೆಗಳಲ್ಲಿನ ಸತ್ಯಾಂಶಗಳು ಬೇರೆ ಸಂದರ್ಭಗಳಲ್ಲಿ ಹೇಗೇ ಇದ್ದರೂ ಚುನಾವಣಾ ಸಂದರ್ಭ‍ದಲ್ಲಿ ಅವು ಕಾನೂನಿನ ಚೌಕಟ್ಟಿನೊಳಗೆ ನಿರ್ಧಾರವಾಗಬೇಕಾಗುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ‘ಅಳಿಸಲಾಗದ ಶಾಯಿ’ಯ ಮೂಲಕ ಮೈಸೂರಿನ ‘ಅರಗು ಮತ್ತು ಬಣ್ಣ’ ಕಾರ್ಖಾನೆಯು ಗಳಿಸಿಕೊಂಡಿರುವ ಸುದೀರ್ಘ ಕಾಲದ ವಿಶ್ವಾಸಾರ್ಹತೆಯು ಅದರ ಬಾಟಲಿಯ ಈಗಿನ ಬಣ್ಣದಿಂದ ಮಣ್ಣುಪಾಲಾಗುತ್ತದೆ.

ವಿ.ಎನ್.ಲಕ್ಷ್ಮೀನಾರಾಯಣ,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT