ಭಾನುವಾರ, ಫೆಬ್ರವರಿ 23, 2020
19 °C

ಮತದಾನದಿಂದ ದೂರ ಇರಿಸುವ ಹುನ್ನಾರ

ದಾಸನೂರು ಕೂಸಣ್ಣ. ಬೆಂಗಳೂರು Updated:

ಅಕ್ಷರ ಗಾತ್ರ : | |

ನಮ್ಮ ಸಂವಿಧಾನವು ಜಾತಿ, ಧರ್ಮ, ವಿದ್ಯಾರ್ಹತೆ, ಮತ... ಈ ಯಾವುದನ್ನೂ ಪರಿಗಣಿಸದೆ, ‘ಒಬ್ಬರಿಗೊಂದು ಮತ’ ಎಂಬ ಸಾರ್ವತ್ರಿಕ ನೀತಿ ಸಾರಿದೆ. ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿರುವಾಗ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ನೋಡಿ ಗಾಬರಿಯಾಯಿತು. ಮತದಾನದ ಸಂದರ್ಭದಲ್ಲಿ ಕೆಲವು ಮತಕ್ಷೇತ್ರಗಳಲ್ಲಿ ಮುಸ್ಲಿಮರನ್ನು ಬಲವಂತದಿಂದ ಊರು ಬಿಡಿಸುವ ಹುನ್ನಾರಗಳ ಬಗೆಗಿನ ಆ ವಿಚಾರವು ದಿಗಿಲು
ಹುಟ್ಟಿಸುವಂತಹುದು.

ಮತದಾನ ನಮ್ಮ ಹಕ್ಕು. ಸರಿ ಅನ್ನಿಸಿದ ಯಾರಿಗೆ ಬೇಕಾದರೂ ವೋಟು ಹಾಕುವುದು ಮತದಾರನ ವೈಯಕ್ತಿಕ ನಿರ್ಧಾರ. ಯಾರಲ್ಲೇ ಆಗಲಿ ಅಂಜಿಕೆ ಸೃಷ್ಟಿಸಿ ಮತದಾನ ಮಾಡದಂತೆ ಮಾಡಿದರೆ ಅದರಂತಹ ಹೀನ ರಾಜಕೀಯ ಕೃತ್ಯ ಬೇರೊಂದಿಲ್ಲ. ಈ ಕೃತ್ಯವನ್ನು ಯಾವುದೇ ವ್ಯಕ್ತಿ, ರಾಜಕೀಯ ಪಕ್ಷ ಅಥವಾ ಸಂಘಟನೆ ಮಾಡಿದರೂ ಅಕ್ಷಮ್ಯ. ಕಠಿಣವಾಗಿ ದಂಡಿಸಬೇಕಾದಂತಹ
ಕೃತ್ಯ ಇದು.

ಸೈದ್ಧಾಂತಿಕವಾಗಿ ಹೋರಾಡಿ, ಮನವೊಲಿಸಿ ಗಳಿಸುವ ಮತಗಳ ಮೌಲ್ಯ ಜಾಸ್ತಿ. ಗೆಲ್ಲುವ ಉಮೇದಿನಿಂದ ನಿರ್ದಿಷ್ಟ ಸಮುದಾಯಗಳನ್ನು ನಿಯಂತ್ರಿಸುವ ನೀಚತನಕ್ಕೆ ಇಳಿಯುವುದು ಪ್ರಜಾಮೌಲ್ಯವಲ್ಲ. ಆಮಿಷವೊಡ್ಡಿ ಮತದಾನದ ಗುರುತಿನ ಚೀಟಿಗಳನ್ನು ತಮ್ಮಲ್ಲಿ ಇರಿಸಿಕೊಳ್ಳುವುದು ಅಥವಾ ಮತದಾನಕ್ಕೆ ಮೊದಲೇ ಬೆರಳಿಗೆ ಶಾಯಿ ಬಳಿಯುವಂತಹ ಹುನ್ನಾರಗಳು ಕೂಡ ನಡೆಯುತ್ತವೆ ಎಂಬ ಮಾತಿದೆ. ಮತದಾರನ ಹಕ್ಕನ್ನು ರಕ್ಷಿಸಲು ಚುನಾವಣಾ ಆಯೋಗವು ಕಟಿಬದ್ಧವಾಗಿರಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು