ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೆ ಮಾಡಿದರೂ ಕಾರ್ಯಪ್ರವೃತ್ತರಾಗದವರು

Last Updated 2 ಮೇ 2019, 20:00 IST
ಅಕ್ಷರ ಗಾತ್ರ

ಮೇ 1ರ ಕಾರ್ಮಿಕರ ದಿನಾಚರಣೆಯ ಹಿಂದಿನ ದಿನ ನಡೆದ ಘಟನೆಯೊಂದನ್ನು ಪ್ರಸ್ತಾಪಿಸಬಯಸುತ್ತೇನೆ. ನನ್ನ ಹತ್ತಿರದ ಸಂಬಂಧಿ, ಪದವಿ ಅಂತಿಮ ವರ್ಷದ ವಿದ್ಯಾರ್ಥಿನಿ ವಸತಿನಿಲಯದಲ್ಲಿ ಇದ್ದಾಳೆ. ಅದರ ಸಮೀಪ ಎರಡು ತಿಂಗಳಿನಿಂದ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಕಾರ್ಮಿಕರೊಬ್ಬರ ಸುಮಾರು 10 ವರ್ಷದ ಬಾಲಕಿ ಶಾಲೆಗೆ ಹೋಗದೇ ಇರುವುದನ್ನು ಗಮನಿಸಿರುವುದಾಗಿ ಆಕೆ ತಿಳಿಸಿದಳು.

ಆಗ ನಾನು, ‘1098 ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡು’ ಎಂದಾಗ, ಅದರಿಂದ ಮುಂದೆ ತನಗೆ ಏನಾದರೂ ಸಮಸ್ಯೆಯಾದರೆ ಎಂದು ಭಯಪಟ್ಟಳು. ಹೇಗೋ ಅವಳನ್ನು ಒಪ್ಪಿಸಿ, ಕರೆ ಮಾಡಿಸಿ, ಸ್ಥಳ ಹಾಗೂ ಇತರ ಮಾಹಿತಿ ನೀಡಿದರೂ ಕಾರ್ಯಪ್ರವೃತ್ತರಾಗದ ಸಿಬ್ಬಂದಿ, ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಮತ್ತೆ ಕರೆ ಮಾಡಿ ಎಂದರು.

ಸಮಾಜದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜನರ ಅರಿವಿನ ಕೊರತೆ, ಭಯ, ಇವೆಲ್ಲ ನಮಗೆ ಯಾಕೆ ಎಂಬ ಉದಾಸೀನ, ಅಧಿಕಾರಿಗಳ ಬೇಜವಾಬ್ದಾರಿತನ ಮುಂತಾದವನ್ನು ಈ ಘಟನೆ ನಮಗೆ ತಿಳಿಸುತ್ತದೆ.

-ದರ್ಶನ್ ಕೆ.ಓ.,ದೇವಿಕೆರೆ ಹೊಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT