ಶುಕ್ರವಾರ, ಸೆಪ್ಟೆಂಬರ್ 20, 2019
25 °C

ಕರ್ಣಾನಂದಕರ ಆಗಿರಲಿ

Published:
Updated:

ಆಕಾಶವಾಣಿಯಲ್ಲಿ ಈ ಹಿಂದೆ ರಣಜಿ ಕ್ರಿಕೆಟ್ ಪಂದ್ಯದ ವೀಕ್ಷಕ ವಿವರಣೆಯನ್ನು ಕೇಳಿದಾಗ, ನಾವು ಸ್ವತಃ ಕ್ರಿಕೆಟ್ ನೋಡಲು ಹೋದರೂ ಸಿಗದಷ್ಟು ಆನಂದ ಸಿಗುತ್ತಿತ್ತು. ಅಂತಹ ಮಾತಿನ ಮೋಡಿಯ ಮೂಲಕ ಆಟದ ಮಾಹಿತಿಯನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ವಿವರಿಸುತ್ತಿದ್ದರು.

ಈ ವರ್ಷ ಐಪಿಎಲ್ ಪಂದ್ಯದ ವೀಕ್ಷಕ ವಿವರಣೆಯನ್ನು ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ವೀಕ್ಷಿಸಿದಾಗ, ವೀಕ್ಷಕ ವಿವರಣೆಕಾರರ ಪದ ಬಳಕೆ, ಮಾತಿನ ವೈಖರಿ ‘ಅಯ್ಯೋ ಇವರು ವಿವರಣೆ ಕೊಡದೇ ಇದ್ದರೆ ಚೆನ್ನಾಗಿತ್ತು’ ಎನ್ನಿಸುವಂತಿತ್ತು. ಅದಕ್ಕಿಂತ ಇಂಗ್ಲಿಷ್ ಅಥವಾ ಹಿಂದಿಯ ವೀಕ್ಷಕ ವಿವರಣೆ ಇರುವ ಕ್ರಿಕೆಟ್ ಪಂದ್ಯ ನೋಡಿದ್ದಿದ್ದರೇ ವಾಸಿ ಎನಿಸುತ್ತಿತ್ತು.

ಮುಂದೆ ವಿಶ್ವಕಪ್ ಕ್ರಿಕೆಟ್ ಪಂದ್ಯ ಇದೆ. ಆ ವೀಕ್ಷಕ ವಿವರಣೆಯೂ ಕರ್ಣ ಕಠೋರ ಆಗದೆ, ಕರ್ಣಾನಂದಕರ ಆಗಿರುವಂತೆ ಉತ್ತಮ ವೀಕ್ಷಕ ವಿವರಣೆಕಾರರನ್ನು ಸಂಘಟಕರು ನಿಯೋಜಿಸಲಿ.

 – ಎಂ.ಪರಮೇಶ್ವರ, ಮದ್ದಿಹಳ್ಳಿ, ಹಿರಿಯೂರು

Post Comments (+)