ಗುರುವಾರ , ಆಗಸ್ಟ್ 5, 2021
24 °C

ವಾಚಕರ ವಾಣಿ: ತಿರುಮಲದಲ್ಲಿ ಕಾಮಗಾರಿ ಆದ್ಯತೆಯ ಸಂಗತಿಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ತಿರುಪತಿಯ ತಿರುಮಲದಲ್ಲಿ ಕರ್ನಾಟಕ ರಾಜ್ಯದ ಛತ್ರಕ್ಕೆ ಸೇರಿದ ಜಾಗದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ₹ 200 ಕೋಟಿ ಮೊತ್ತಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿರುವುದನ್ನು (ಪ್ರ.ವಾ., ಜುಲೈ 10) ತಿಳಿದು ಆಶ್ಚರ್ಯ ಮತ್ತು ದಿಗ್ಭ್ರಮೆಯಾಯಿತು. ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದರಿಂದ ಸಂಕಷ್ಟದಲ್ಲಿ ಇರುವವರಿಗೆ ಪರಿಹಾರ ನೀಡಬೇಕಿರುವ ಸರ್ಕಾರ, ತುರ್ತು ಅಗತ್ಯವಲ್ಲದ ಈ ಯೋಜನೆಗೆ ಹಣ ನೀಡಲು ಹೊರಟಿರುವುದು ವಿಪರ್ಯಾಸ.

ನಷ್ಟದಲ್ಲಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರಿಗೆ ಒಂದು ವರ್ಷ ವೇತನರಹಿತ ರಜೆ ನೀಡಲು ಚಿಂತನೆ ನಡೆದಿದೆ. ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ನಿರತರಾಗಿರುವ ಆಶಾ ಕಾರ್ಯಕರ್ತೆಯರು ಆರ್ಥಿಕ ಸೌಲಭ್ಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಹೀಗೆ ವಿವಿಧ ವಲಯಗಳ ಜನರು ಅನೇಕ ಜ್ವಲಂತ ಸಮಸ್ಯೆಗಳು ಹಾಗೂ ಆರ್ಥಿಕ ಸಂಕಷ್ಟಗಳ ಸುಳಿಗೆ ಸಿಲುಕಿ ಸಂಕಷ್ಟದಲ್ಲಿರುವಾಗ, ಸರ್ಕಾರ ಇಂತಹ ನಿರ್ಧಾರ ತೆಗೆದುಕೊಂಡಿರುವುದು ಒಪ್ಪುವಂತಹ ವಿಚಾರವಲ್ಲ. ಆಳುವ ಸರ್ಕಾರಕ್ಕೆ ಕಣ್ಣು, ಕಿವಿಯಷ್ಟೇ ಅಲ್ಲ, ಹೃದಯವಂತಿಕೆಯೂ ಇದ್ದರೆ ಮಾತ್ರ ಜನರ ತುರ್ತು ಅಗತ್ಯಗಳು ಅರ್ಥವಾಗುತ್ತವೆ. ವರಮಾನ ಖೋತಾ ಮತ್ತು ಈಗಿನ ದುಗುಡದ ಸ್ಥಿತಿ ಅರಿತು ಸರ್ಕಾರ ನೈಜ ಸಮಸ್ಯೆಗಳಿಗೆ ಸ್ಪಂದಿಸಲಿ.

- ಎಚ್.ಚಂದ್ರಪ್ಪ, ನೀಲಗುಂದ, ಹರಪನಹಳ್ಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.