ಸ್ವಲ್ಪ ಅಸ್ವಸ್ಥತೆಯ ಕಾರಣದಿಂದ, ನಮ್ಮ ಮನೆಯ ಬಳಿಯೇ ಇರುವ ಚೋಳನಾಯಕನಹಳ್ಳಿಯ ಕ್ಲಿನಿಕ್ ಒಂದಕ್ಕೆ ಹೋದೆ. ಆಗ ಸಂಜೆ 7 ಗಂಟೆ. ಕ್ಲಿನಿಕ್ಗೆ ಹೊಂದಿಕೊಂಡಂತೆ ಅಲ್ಲೊಂದು ಮೆಡಿಕಲ್ ಸ್ಟೋರ್ ಇದ್ದು, ಅಲ್ಲಿನ ವೈದ್ಯೆಯ ಪತಿಯೇ ಅದರ ಮೇಲ್ವಿಚಾರಕರು. ಆತ ನನ್ನ ಕೈಗಳಿಗೆ ಸ್ಯಾನಿಟೈಸರ್ ಹಾಕಿ, ಆಕ್ಸಿಜನ್ ಪ್ರಮಾಣ ಹಾಗೂ ಜ್ವರದ ಪ್ರಮಾಣವನ್ನು ಪರೀಕ್ಷಿಸಿ, ‘ಏನು ತೊಂದರೆ’ ಎಂದು ಕೇಳಿದರು. ‘ಎರಡು-ಮೂರು ದಿನಗಳಿಂದ ಹಸಿವಾಗುತ್ತಿಲ್ಲ, ನಿದ್ರೆ ಸರಿಯಾಗಿ ಬರುತ್ತಿಲ್ಲ, ಡಾಕ್ಟರನ್ನು ಕಾಣಬೇಕಿತ್ತು’ ಎಂದೆ. ‘ವಯಸ್ಸೆಷ್ಟು’ ಎಂದು ಕೇಳಿದರು. ‘ನನಗೆ 74’ ಎಂದೆ. ‘60 ವರ್ಷ ಮೇಲ್ಪಟ್ಟವರನ್ನು ನಾವು ನೋಡುವುದಿಲ್ಲ’ ಎಂದು ವಾಪಸ್ ಕಳುಹಿಸಿಬಿಟ್ಟರು.

ಈ ಕೋವಿಡ್ ಸಂದಿಗ್ಧದ ಕಾಲದಲ್ಲಿ ಡಾಕ್ಟರ್ಗಳ ಕರ್ತವ್ಯ ಬಲು ದೊಡ್ಡದೇ ಇದೆ. ಎಲ್ಲಾ ವಯೋಮಾನದ ಅಸ್ವಸ್ಥರನ್ನು ಮಾನವೀಯ ದೃಷ್ಟಿಯಿಂದ ಕಂಡು ಚಿಕಿತ್ಸೆ ನೀಡಬೇಕಾದುದು ತಮ್ಮ ವೃತ್ತಿಧರ್ಮ ಎಂಬುದನ್ನು ಅವರು ಮೊದಲು ಮನಗಾಣಬೇಕು. ಇಂತಿಷ್ಟು ವಯಸ್ಸಾದ ರೋಗಿಗಳಿಗೆ ಚಿಕಿತ್ಸೆ ನೀಡಕೂಡದು ಎಂಬ ನಿಯಮವೇನಾದರೂ ಇದೆಯೇ?

-ಎಲ್.ಚಿನ್ನಪ್ಪ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.