ಶನಿವಾರ, ಅಕ್ಟೋಬರ್ 31, 2020
24 °C

ವಾಚಕರ ವಾಣಿ: ಅನುಕರಣೀಯ ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಪಾನ್‌ನ ನಿರ್ಗಮಿತ ಪ್ರಧಾನಿ ಶಿಂಜೊ ಅಬೆ ಅವರು ಅನಾರೋಗ್ಯದ ಕಾರಣ ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ‘ಜನಾದೇಶಕ್ಕೆ ಆತ್ಮವಿಶ್ವಾಸದಿಂದ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ಹೇಳಿದ್ದಾರೆ. ಇದು, ಇಡೀ ವಿಶ್ವದ ರಾಜಕೀಯ ವಲಯಕ್ಕೆ ಮಾದರಿಯಾದ ನಡೆಯೆಂದೇ ಭಾವಿಸಬಹುದು. ರಾಜಕಾರಣಿಗಳು ಜನಾದೇಶವನ್ನು ಧಿಕ್ಕರಿಸಿ, ಅಧಿಕಾರದ ಆಸೆಗಾಗಿ ವಾಮಮಾರ್ಗದಿಂದ ರಾಜ್ಯಸಭೆ, ವಿಧಾನ ಪರಿಷತ್ತನ್ನು ಪ್ರವೇಶಿಸಲು ಹಪಹಪಿಸುತ್ತಿರುವ ಈ ಹೊತ್ತಿನಲ್ಲಿ ಅಬೆ ಅವರ ನಡೆ ಅನುಕರಣೀಯ. ಅನಾರೋಗ್ಯ ಇರಲಿ ಅಥವಾ ಅನನುಭವವೇ ಇರಲಿ ಜನರ ಕಷ್ಟಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ, ಅಂತಹವರು ಆತ್ಮವಂಚನೆ ಇಲ್ಲದೆ ವಾಸ್ತವವನ್ನು ಒಪ್ಪಿಕೊಂಡು ರಾಜೀನಾಮೆ ನೀಡುವಂತಹ ಔದಾರ್ಯ ಬೆಳೆಸಿಕೊಂಡರೆ ಎಷ್ಟು ಚೆನ್ನ?

–ಈರಣ್ಣ ಎನ್.ವಿ., ನಾರಾಯಣಪುರ ಪಾಳ್ಯ, ಶಿರಾ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು