ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ಸರಪಳಿಯಲ್ಲ...

Last Updated 24 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಜಾತ್ರೆಯ ಸಂದರ್ಭದಲ್ಲಿ ಕಾರಣಿಕದ ನುಡಿಯಾಗಿ ‘ಕಬ್ಬಿಣ ಸರಪಳಿ ಹರೀತಲೇ ಪರಾಕ್’ ಎಂದು ನುಡಿದ ಗೊರವಪ್ಪನ ಮಾತಿನ ಅರ್ಥವನ್ನು ಲೋಕದ ಜನ ಭಿನ್ನಭಿನ್ನವಾಗಿ ಅರ್ಥೈಸುತ್ತಿದ್ದಾರೆ.

ರಾಜಕೀಯ ಆಸಕ್ತರು ಗೊರವಪ್ಪನ ಅರ್ಥಪೂರ್ಣ ವ್ಯಾಖ್ಯೆಯನ್ನು ತಪ್ಪಾಗಿ ಗ್ರಹಿಸಿ ‘ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಸರಪಳಿ ಮುರಿದು ಬೀಳುವ ಸೂಚನೆ’ ಎಂದು ಅರ್ಥೈಸಿರುವರೆಂದು ವರದಿಯಾಗಿದೆ.

ಜೆಡಿಎಸ್-ಕಾಂಗ್ರೆಸ್ ನಡುವಿನ ಮೈತ್ರಿಯು ‘ಅಧಿಕಾರವೆಂಬ ಬಂಗಾರದ ಸರಪಳಿಯಿಂದ ಬಂಧಿತ’ವಾಗಿರುವುದರಿಂದ, ಗೊರವಪ್ಪನ ಕಾರಣಿಕದ ‘ಕಬ್ಬಿಣದ ಸರಪಳಿ’ ಪದಗಳು ಮೈತ್ರಿ ಸರ್ಕಾರಕ್ಕೆ ಅನ್ವಯ ಆಗಲಿಕ್ಕಿಲ್ಲವೆಂಬುದು ನನ್ನ ಅನಿಸಿಕೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT