ಭಾನುವಾರ, ಜನವರಿ 24, 2021
17 °C

ಪರಿಷತ್‌ ಚುನಾವಣೆ: ವ್ಯಾಮೋಹ ಬೇಡ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಘಟಕ ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಹತ್ತಿರ ಬರುತ್ತಿದೆ. ಎಲ್ಲೋ ಮಲಗಿದ್ದವರು ನಿದ್ದೆಯಿಂದ ಎದ್ದಿದ್ದಾರೆ. ಕೆಲವರಂತೂ ತಾವು ಬರೆದ ಹಿಂದಿನ ಸಾಹಿತ್ಯವನ್ನೇ ಪುನರ್ ಮುದ್ರಿಸುತ್ತಾ ಇಲ್ಲವೇ ಸ್ಥಳೀಯ ಪತ್ರಿಕೆಗಳಲ್ಲಿ ಬೆಳಕು ಕಂಡ ತಮ್ಮ ಸಾಹಿತ್ಯಕ್ಕೆ ಹೊಳಪು ನೀಡುತ್ತಾ ತಮ್ಮ ಸಾಹಿತ್ಯ ಪ್ರೀತಿ ತೋರುತ್ತಾ ಮತದಾರರನ್ನು ಸೆಳೆಯಲು ಹಾತೊರೆಯುತ್ತಿದ್ದಾರೆ. ಒಮ್ಮೆ ಅಧ್ಯಕ್ಷಗಿರಿ ಅನುಭವಿಸಿ, ಜಾತಿ ಬಾಂಧವ್ಯ ಮೆರೆದು ಶೂನ್ಯ ಸಂಪಾದನೆ ಮಾಡಿದವರು ಸಹ ಪುನಃ ಅಧ್ಯಕ್ಷಗಿರಿ ಪಡೆಯಲು ನೋಡುತ್ತಿದ್ದಾರೆ.

ಪರಿಷತ್ತಿನ ಮತದಾರರು ಪರಿಸ್ಥಿತಿಯನ್ನು ಮತ್ತು ವ್ಯಕ್ತಿಗಳನ್ನು ಸೂಕ್ಷ್ಮವಾಗಿ ಗಮನಿಸಿ, ನಿಜ ಸಾಹಿತ್ಯಪ್ರೇಮಿಗಳನ್ನು,
ಸಾಹಿತ್ಯದ ಕುರಿತು ಕಾಳಜಿ ಇರುವವರನ್ನು, ಸಾಹಿತ್ಯದ ಪುಸ್ತಕ ಪ್ರಕಟಿಸಿದವರನ್ನು ಗಣನೆಗೆ ತೆಗೆದುಕೊಂಡು ಮತ ನೀಡಬೇಕು. ಆಗ ಅವರು ಸಹ ಸಾಹಿತ್ಯ ಲೋಕಕ್ಕೆ ಪ್ರತ್ಯಕ್ಷ ಇಲ್ಲವೇ ಪರೋಕ್ಷವಾಗಿ ಕಿಂಚಿತ್ತಾದರೂ ಸೇವೆ ಸಲ್ಲಿಸಿದಂತಾ
ಗುತ್ತದೆ. ಪರಿಚಿತರು, ಅಪರಿಚಿತರು, ಜಾತಿ ಮೇಲಣ ಪ್ರೀತಿ, ಊಟ ತಿಂಡಿಯ ವ್ಯಾಮೋಹ ಕೆಲಸ ಮಾಡದಿರಲಿ.

- ಪ್ರಕಾಶ್ ಮಲ್ಕಿಒಡೆಯರ್, ಹೂವಿನಹಡಗಲಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.