ಸೋಮವಾರ, ಜನವರಿ 18, 2021
19 °C

ನಾಟಕ ಅಕಾಡೆಮಿ: ಪ್ರಶಸ್ತಿ ಪಟ್ಟಿ ಪರಿಷ್ಕರಣೆ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ನಾಟಕ ಅಕಾಡೆಮಿಯು ಈ ಹಿಂದಿನ ಪದಾಧಿಕಾರಿಗಳ ಅವಧಿಯಲ್ಲಿ ಪ್ರಕಟಿಸಿದ್ದ ಪ್ರಶಸ್ತಿ ಪುರಸ್ಕೃತರ ಆಯ್ಕೆ ಪಟ್ಟಿಯನ್ನು‌ ರದ್ದು ಮಾಡಲಿದೆ ಎಂಬ ಸುದ್ದಿಯು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಈ ಪಟ್ಟಿಯನ್ನು ಪರಿಷ್ಕರಿಸುವ ಅಥವಾ ಕೈಬಿಡುವ ನಿರ್ಧಾರವು ಅಕಾಡೆಮಿಯ ಘನತೆಯನ್ನು ಗಾಸಿಗೊಳಿಸುತ್ತದೆ, ಕನ್ನಡದ ಸಾಂಸ್ಕೃತಿಕ ನಡೆ ಲಯ ತಪ್ಪುತ್ತದೆ. ಪ್ರಶಸ್ತಿಗೆ ಆಯ್ಕೆಯಾಗಿರುವ ಕಲಾವಿದರ ಮನಸ್ಸನ್ನು ನೋಯಿಸುವುದು, ಅವಮಾನಿಸುವುದು ತರವಲ್ಲ.

ಗಿನ ಅಧ್ಯಕ್ಷರು ಮತ್ತು ಸದಸ್ಯರು ಹಿಂದಿನ ಪಟ್ಟಿಯನ್ನೇ ಮಾನ್ಯ ಮಾಡಿ, ಅಕಾಡೆಮಿಯ ಘನತೆಯನ್ನು ಹೆಚ್ಚಿಸುತ್ತಾರೆ ಎಂಬ ನಂಬಿಕೆ ಹುಸಿಯಾಗದಿರಲಿ. 

-ನಟರಾಜ್ ಹೊನ್ನವಳ್ಳಿ, ತುಮಕೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.