ಜಗತ್ತು ಕಂಡ ಮಹಾ ರಾಜನೀತಿಶಾಸ್ತ್ರಜ್ಞ ಪ್ಲೇಟೊನ ‘ಆದರ್ಶ ರಾಜ ಮತ್ತು ಆದರ್ಶ ರಾಜ್ಯ’ ಕಲ್ಪನೆಯು ರಾಜನಾದವ ಶ್ರೀಸಾಮಾನ್ಯನ ಸೇವಕ ಎನ್ನುವ ತತ್ವವನ್ನು ಪ್ರತಿಬಿಂಬಿಸುತ್ತದೆ. ಇಂಗ್ಲಿಷ್ ಭಾಷೆಯ ಜನಪ್ರಿಯ ನುಡಿಮುತ್ತು ‘ಸಿಂಪಲ್ ಲಿವಿಂಗ್ ಆ್ಯಂಡ್ ಹೈ ಥಿಂಕಿಂಗ್’ ಎಂಬುದನ್ನು ಕೇಳುತ್ತಾ ಬೆಳೆದವರು ನಾವು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂಬ ಸತ್ಯ ಅಡಗಿರುವುದು ಮಿಥ್ಯವೇನಲ್ಲ. ಆದರೆ, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶಗಳ ಸಾಲಿನಲ್ಲಿರುವ ಭಾರತೀಯರಾದ ನಾವು ಇವೆಲ್ಲವನ್ನೂ ಮರೆತಂತಿದೆ.

ಒಮ್ಮೆ ಕರ್ನಾಟಕದ ಸಚಿವರೊಬ್ಬರು ತಮ್ಮ ಕಾರನ್ನು ಹಿಂದಿಕ್ಕಿದ ಎನ್ನುವ ಕಾರಣಕ್ಕೆ ಹಿಂದಿಕ್ಕಿದ ಕಾರನ್ನು ಹಿಂಬಾಲಿಸಿ ಹೋಗಿ ಹಲ್ಲೆ ಮಾಡಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಬೆಂಬಲಿಗನಿಗೆ ಕಪಾಳಮೋಕ್ಷ ಮಾಡಿದ್ದು ಜನರ ಮನದಿಂದ ಮರೆಯಾಗಿಲ್ಲ. ನಮ್ಮ ದೇಶದಲ್ಲಿ ಮಹಿಳಾ ರಾಜಕಾರಣಿಗಳನ್ನೊಳಗೊಂಡು ಹಲವಾರು ರಾಜಕಾರಣಿಗಳು ಶ್ರೀಸಾಮಾನ್ಯನ ಮೇಲೆ ಹಲ್ಲೆ ಮಾಡಿದ ಅನೇಕ ಉದಾಹರಣೆಗಳಿವೆ. ಇಂತಹ ಹಲ್ಲೆಗಳು ಎಲ್ಲ ರಾಜಕೀಯ ಪಕ್ಷಗಳಿಂದಲೂ ಆಗಿವೆ. ಈಗ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪಕ್ಷದ ಕಾರ್ಯಕರ್ತನ ಕೆನ್ನೆಗೆ ಬಾರಿಸುವ ಮೂಲಕ ಮತ್ತೆ ಸುದ್ದಿ ಮಾಡಿದ್ದಾರೆ.

ಈ ಬಗೆಯ ಘಟನೆಗಳು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ನಿರಂಕುಶ ಪ್ರಭುತ್ವವನ್ನು ನೆನಪಿಸುತ್ತವೆ. ಇವುಗಳ ಮೇಲೆ ನಿಯಂತ್ರಣದ ಅಗತ್ಯವಿದೆಯಲ್ಲದೆ ಇಂತಹವರು ಪ್ರಜಾಪ್ರಭುತ್ವದಲ್ಲಿ ಅಧಿಕಾರ ಪಡೆಯಲು ಅನರ್ಹರು ಕೂಡ.

– ಬೀರಣ್ಣ ನಾಯಕ ಮೊಗಟಾ,ಯಲ್ಲಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.