ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿರೇಕದ ಅಭಿಮಾನ: ಕಠಿಣ ಶಿಕ್ಷೆಯಾಗಲಿ

Last Updated 3 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ನಾಯಕನಟ ಸುದೀಪ್ ಅವರ 50ನೇ ವರ್ಷದ ಹುಟ್ಟುಹಬ್ಬದ ಸಲುವಾಗಿ, ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಬಂಡ್ರಿ ಎಂಬ ಗ್ರಾಮದಲ್ಲಿ ಅಭಿಮಾನಿಗಳು ಸುದೀಪ್ ಅವರ ಕಟೌಟ್ ಮುಂದೆ ಕೋಣವೊಂದನ್ನು ಬಲಿ ನೀಡಿದ್ದಲ್ಲದೆ, ರಕ್ತವನ್ನು ಕೈಯಲ್ಲಿ ಹಿಡಿದು ಕಟೌಟ್‌ಗೆ ಎರಚಿರುವುದು ಅಮಾನವೀಯ ನಡವಳಿಕೆ. ಕೋಣ ಬಲಿ ನೀಡುವುದು ಅಪರಾಧ ಎಂದು ಗೊತ್ತಿದ್ದರೂ ಅಭಿಮಾನಿಗಳು ಹೀಗೆ ಅತಿರೇಕದಿಂದ ವರ್ತಿಸಿದ್ದು ಸರಿಯಲ್ಲ.

ಯಾವುದೇ ಒಬ್ಬ ನಟ ತನ್ನ ಹುಟ್ಟುಹಬ್ಬದ ದಿನದಂದು ಅಭಿಮಾನಿಗಳ ಇಂತಹ ಹುಚ್ಚು ವರ್ತನೆಯನ್ನು ಸಹಿಸು ವುದಿಲ್ಲ. ಅಭಿಮಾನಿಗಳ ಇಂತಹ ಹುಚ್ಚುತನದ ಪರಮಾವಧಿ ಪರೋಕ್ಷವಾಗಿ ನಟರಿಗೆ ಮಾಡಿದ ಅವಮಾನದಂತೆ ಎಂಬುದನ್ನು ಮರೆಯಬಾರದು. ಸಾಮಾಜಿಕ ಕಳಕಳಿ ಹೊಂದಿರುವ ನಟರು ಕೂಡ, ಅಭಿಮಾನಿಗಳ ಅತಿರೇಕದ ವರ್ತನೆಗಳಿಗೆ ಅವಕಾಶ ನೀಡದಂತೆ ಮನವಿ ಮಾಡಿ ಜವಾಬ್ದಾರಿ ಮೆರೆಯಬೇಕಾಗಿದೆ. ಏನೇ ಆಗಲಿ ಕೋಣ ಬಲಿ ನೀಡಿದ ಅಭಿಮಾನಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡುವ ಮೂಲಕ ಭವಿಷ್ಯದಲ್ಲಿ ಇಂತಹ ಘಟನೆಗಳು ಮರು ಕಳಿಸದಂತೆ ಎಚ್ಚರಿಕೆ ವಹಿಸಬೇಕಾಗಿದೆ.

-ಮುರುಗೇಶ ಡಿ., ದಾವಣಗೆರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT