ಸಂಸ್ಥೆಯ ಗ್ರಹಣ ಬಿಡಿಸುವ ಕೆಲಸವಾಗಲಿ
ಸಾಂವಿಧಾನಿಕ ಸಂಸ್ಥೆಯಾಗಿರುವ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕಳಂಕ ಅಂಟಿಸುವ ಕೃತ್ಯಗಳು ಪದೇ ಪದೇ ಹೊರಗೆ ಬರುತ್ತಿವೆ. ಪ್ರಥಮ ದರ್ಜೆ ಸಹಾಯಕರ ನೇಮಕಾತಿಗಾಗಿ ನಡೆಯಬೇಕಿದ್ದ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ರಾಜ್ಯದ ನಿರುದ್ಯೋಗಿ ಯುವಜನರ ಬಾಳಿನಲ್ಲಿ ಚೆಲ್ಲಾಟ ಆಡುವಂತಹ ದುಷ್ಕೃತ್ಯ. ಎಷ್ಟೋ ಯುವಕ, ಯುವತಿಯರು ಕಷ್ಟಪಟ್ಟು ಅಭ್ಯಾಸ ಮಾಡಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿರುತ್ತಾರೆ. ಆದರೆ ಪ್ರಶ್ನೆಪತ್ರಿಕೆ ಸೋರಿಕೆಯಾದರೆ ಅವರು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಕೆಲವು ಸಿಬ್ಬಂದಿಯ ಕಣ್ಣಾಮುಚ್ಚಾಲೆ ಆಟದಿಂದ ಸಂಸ್ಥೆಗೆ ಮಸಿ ಮೆತ್ತಿಕೊಳ್ಳುತ್ತಿದೆ. ಇನ್ನಾದರೂ ಸಂಸ್ಥೆಯ ಗ್ರಹಣ ಬಿಡಿಸುವ ಕೆಲಸವನ್ನು ಸರ್ಕಾರ ಪ್ರಾಮಾಣಿಕವಾಗಿ ಮಾಡಲಿ.
- ಪ್ರಶಾಂತ್ ಬುಳ್ಳಣ್ಣವರ, ಉಗರಗೋಳ, ಬೆಳಗಾವಿ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.