ವಿದ್ಯಾಗಮ-2 ನಿಯಮದ ಪ್ರಕಾರ, ಪ್ರೌಢಶಾಲಾ ಮಕ್ಕಳಲ್ಲಿ ಕೆಲವರು ಶಾಲೆಗೆ ಬೆಳಿಗ್ಗೆ ಬಂದು ಮಧ್ಯಾಹ್ನ ಹೋದರೆ, ಇನ್ನು ಕೆಲವು ಮಕ್ಕಳು ಮಧ್ಯಾಹ್ನ ಬಂದು ಸಂಜೆ ಹೋಗುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಐದಾರು ಕಿ.ಮೀ. ದೂರದಿಂದ ಮಕ್ಕಳು ನಡೆದುಕೊಂಡೋ ಸೈಕಲ್ ತುಳಿದುಕೊಂಡೋ ಬರುತ್ತಾರೆ.

ಬಹುತೇಕ ಪೋಷಕರು ಕೂಲಿ ನಾಲಿ, ವ್ಯವಸಾಯ ಚಟುವಟಿಕೆಗೆ ಹೋಗಿರುತ್ತಾರೆ. ಮಧ್ಯಾಹ್ನ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗದೇ ಇರಬಹುದು. ಇದರಿಂದ, ಬೆಳೆಯುತ್ತಿರುವ ಮಕ್ಕಳು ಕುಪೋಷಣೆಗೆ ಒಳಗಾಗಬಹುದು. ಎಸ್‌ಎಸ್‌ಎಲ್‌ಸಿ ಓದುವ ಮಕ್ಕಳು ಪಬ್ಲಿಕ್ ಪರೀಕ್ಷೆಗೆ ಸಿದ್ಧರಾಗಬೇಕಾಗಿರುವುದರಿಂದ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಸರಿಯಾಗಿ ಊಟ ಮಾಡದೇ ಹೋದಾಗ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ. ಕೊರೊನಾ ಜಾಗೃತಿ ಮುಂಜಾಗ್ರತಾ ಕ್ರಮ ಅನುಸರಿಸುತ್ತಾ ಅಕ್ಷರದಾಸೋಹ ಆರಂಭಿಸಬೇಕು.

ಪ್ರಹ್ಲಾದ ವಾ. ಪತ್ತಾರ,ಯಡ್ರಾಮಿ, ಕಲಬುರ್ಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.