‘ಸತ್ಯ ಹರಿಶ್ಚಂದ್ರರಾದ ಪಿಡಿಒಗಳು ಎಲ್ಲಿದ್ದಾರೆ?’ ಎಂಬ ವಸತಿ ಸಚಿವರ ಪ್ರಶ್ನೆಯ ಸುತ್ತ ಸಾಮಾನ್ಯ ಜನರಲ್ಲಿ ಹಲವು ಪ್ರಶ್ನೆಗಳು ಹುಟ್ಟದಿರವು. ಇವರು ಹೇಳುವ ಪ್ರಕಾರ ಎಲ್ಲರೂ ಭ್ರಷ್ಟರು ಎಂದಾದರೆ, ಅವರಿಂದ ನಾವು ಉತ್ತಮ ಆಡಳಿತ ನಿರೀಕ್ಷಿಸುವುದು ಹೇಗೆ? ಪಿಡಿಒಗಳು ಮಾತ್ರ ಭ್ರಷ್ಟರೇ? ಹಾಗಿದ್ದರೆ ಚುನಾಯಿತ ಸದಸ್ಯರು ಇದನ್ನು ಕಂಡು ಸುಮ್ಮನಿರುವರೇ? ಯಾರು ಎಷ್ಟು ಸತ್ಯವಂತರು ಎಂಬುದರ ಬಗ್ಗೆ ಇತ್ತ ಅಧಿಕಾರಿಗಳು, ಅತ್ತ ಚುನಾಯಿತ ಪ್ರತಿನಿಧಿಗಳುಆತ್ಮಾವಲೋಕನ ಮಾಡಿಕೊಳ್ಳಬೇಕಾದಂತಹ ಸಂದರ್ಭ ಇದು.
ಅಧಿಕಾರಿಗಳು ಸರಿಯಿಲ್ಲ ಎಂದು ಅಧಿಕಾರಸ್ಥ ರಾಜಕಾರಣಿಗಳು ಬಹಿರಂಗವಾಗಿ ಹೇಳಿಕೆ ನೀಡುವುದು ಸಮಂಜಸವಲ್ಲ. ಇದು, ಅಧಿಕಾರಿ ವರ್ಗದ ಬಗ್ಗೆ ಜನರಲ್ಲಿ ಅವಿಶ್ವಾಸ ಮೂಡಿಸುತ್ತದೆ. ಅದರ ಬದಲು, ಅದಕ್ಷ, ಭ್ರಷ್ಟ ಅಧಿಕಾರಿಗಳನ್ನು ಗುರುತಿಸಿ, ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲಿ. ದಕ್ಷರನ್ನು, ಪ್ರಾಮಾಣಿಕರನ್ನು ಆಯಕಟ್ಟಿನ ಜಾಗಗಳಲ್ಲಿ ಕೂರಿಸಲಿ.
–ಶ್ವೇತಾ ಎನ್. ಸೊರಬ,ಶಿವಮೊಗ್ಗ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.