ಭಾನುವಾರ, ಮೇ 29, 2022
21 °C

ವಾಚಕರ ವಾಣಿ| ಸೂಕ್ತ ವಿಷಯಕ್ಕೆ ಸಿಗಲಿ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿಂದೂ ದೇವಾಲಯಗಳ ಮೇಲಿನ ಸರ್ಕಾರದ ಹಿಡಿತವನ್ನು ಸಡಿಲಗೊಳಿಸಿ, ಅವುಗಳ ಸ್ವತಂತ್ರ ನಿರ್ವಹಣೆಗೆ ಅನುಗುಣವಾದ ಕಾನೂನು ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ (ಪ್ರ.ವಾ., ಡಿ. 30). ಕರ್ನಾಟಕದ ಚುನಾಯಿತ ಸರ್ಕಾರವು ಹಿಂದೂ ಧರ್ಮಕ್ಕೆ ಸಂಬಂಧಪಟ್ಟ ಕಾನೂನುಗಳನ್ನು ಮಾತ್ರ ಜಾರಿಗೆ ತರಲು ಅಧಿಕಾರದಲ್ಲಿ ಇರುವುದೇ?

ಬೆಳಗಾವಿ ಅಧಿವೇಶನವು ರಾಜ್ಯದ ಜನತೆಗೆ ಸಂಬಂಧಿಸಿದ ಗಂಭೀರ ವಿಷಯಗಳನ್ನು ಚರ್ಚಿಸದೆ, ಬರೀ ಮತಾಂತರ ನಿಷೇಧ ಕಾಯ್ದೆಯ ಪರ, ವಿರೋಧದ ಚರ್ಚೆಯಲ್ಲೇ ಮುಗಿದುಹೋಯಿತು. ರಾಜ್ಯವನ್ನು ಕಾಡುತ್ತಿರುವ ಸಮಸ್ಯೆಗಳಾದ ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೋವಿಡ್‌ ಹರಡುವಿಕೆ, ನೆರೆ ಪರಿಹಾರ, ನಿರುದ್ಯೋಗ, ಹೊಸ ಶಿಕ್ಷಣ ನೀತಿ, ಮಹಿಳಾ ಮತ್ತು ಮಕ್ಕಳ ಅಪೌಷ್ಟಿಕತೆಯಂತಹ ಸಾಲು ಸಾಲು ವಿಷಯಗಳನ್ನು ಸರ್ಕಾರ ಅಥವಾ ವಿರೋಧ ಪಕ್ಷಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆದ್ದರಿಂದ ಬಜೆಟ್ ಅಧಿವೇಶನಕ್ಕೂ ಮುನ್ನ ಮತಧರ್ಮಗಳ ವಿಷಯಗಳನ್ನು ಬಿಟ್ಟು ಈಗಿರುವ ಸಮಸ್ಯೆಗಳನ್ನು ಬಗೆಹರಿಸುವ ದಿಸೆಯಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಲಿ.

- ಸುವರ್ಣ ಸಿ.ಡಿ., ತರೀಕೆರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು