ಮಂಗಳವಾರ, ಸೆಪ್ಟೆಂಬರ್ 28, 2021
21 °C

ಪ್ರಯೋಗಿಸಿ ನೋಡಿ ಪೆಗಾಸಸ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾನೊಬ್ಬ ಸಾಮಾನ್ಯ ರೈತ. ನನ್ನ ಮೇಲೆ ‘ಪೆಗಾಸಸ್’ ಕುತಂತ್ರಾಂಶ ಪ್ರಯೋಗಿಸಿ ನೋಡಿ, ನಿಮಗೆ ತಿಳಿಯುತ್ತದೆ... ನನ್ನ ಅಂಗೈಯಗಲದ ಜಮೀನಿನ ಖಾತೆ ಕಿರ್ದಿಗಾಗಿ ಅದೆಷ್ಟು ಬಾರಿ ತಹಶೀಲ್ದಾರ್ ಕಚೇರಿಗೆ ಎಡತಾಕಿದ್ದೇನೆಂದು... ಬಿತ್ತನೆ ಬೀಜಕ್ಕಾಗಿ ಕಿಕ್ಕಿರಿದ ಸಾಲಿನಲ್ಲಿ ನಿಂತು, ಲಾಠಿ ಪ್ರಹಾರವಾದಾಗ ಯಾವ್ಯಾವ ಗಲ್ಲಿಗೆ ಬಿದ್ದು ಬಚಾವಾದೆನೆಂದು... ಅದೆಷ್ಟು ಬಾರಿ ಬೆಳೆಸಾಲ ಕೇಳಲು ಕಂಡ ಕಂಡ ಬ್ಯಾಂಕುಗಳಿಗೆ ಅಲೆದಿದ್ದೇನೆಂದು... ಸರಿರಾತ್ರಿಗಳಲ್ಲಿ ಬಂದುಹೋಗುವ ಕರೆಂಟನ್ನು ಕಾಯ್ದುಕೊಂಡು ನಿಶಾಚರಿಯಂತೆ ಅಂಡಲೆಯುತ್ತಿದ್ದೇನೆಂದು... ಬೆಳೆದ ಬೆಳೆಗೆ ಬೆಲೆ ಇಲ್ಲದಾದಾಗ ಬಿಸಿಲು ಬೆಳದಿಂಗಳ ಬೀದಿಯಲಿ ಮಾರಾಟ ಮಾಡಲು ಕೂಗಿ ಕೂಗಿ ದನಿ ಕಳೆದುಕೊಂಡಿದ್ದೇನೆಂದು ತಿಳಿಯಲು... ನನ್ನ ಮೇಲೊಮ್ಮೆ ಪ್ರಯೋಗಿಸಿ ನೋಡಿ...ಪೆಗಾಸಸ್‌.

– ಜೆ.ಬಿ.ಮಂಜುನಾಥ, ಪಾಂಡವಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು