ಭಾನುವಾರ, ಮೇ 29, 2022
30 °C

ಯಾವ ಜೋಳಿಗೆಗಿದೆ ನೈತಿಕ ಅಧಿಕಾರ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಗುರು’ ಲಘುವಾದರೆ ಹೇಗೆ ಸ್ವಾಮಿ?’ ಎಂಬ ರವೀಂದ್ರ ಭಟ್ಟ ಅವರ ಲೇಖನ (ಪ್ರ.ವಾ., ಡಿ.30) ಸಕಾಲಿಕ ಹಾಗೂ ಸಮರ್ಥವಾಗಿದೆ. ಮಠಗಳ ಸ್ವಾಮಿಗಳು ರಾಜಕೀಯ ಮಾಡುತ್ತಿರುವುದರ ಬಗ್ಗೆ ಹಾಗೂ ಕೆಪಿಎಸ್‌ಸಿಯು ಭ್ರಷ್ಟ ತಿರಸ್ಕೃತ ಪಟ್ಟಿಯ ಅಭ್ಯರ್ಥಿಗಳ ಪರವಾಗಿ ಲಾಬಿಗೆ ತೊಡಗಿರುವ ಬಗ್ಗೆ ಮಾತನಾಡಿರುವುದು ಸಮಂಜಸವಿದೆ.

ಆದರೆ, ಮುಖ್ಯಮಂತ್ರಿಯೊಬ್ಬರು ಬಜೆಟ್‌ನ ಸಾರ್ವಜನಿಕ ಅಭಿವೃದ್ಧಿಯ ಹಣವನ್ನು ಮಠಗಳಿಗೆ ಅನುದಾನವಾಗಿ ನೀಡಿದಾಗ, ಆ ಹಣಕ್ಕೆ ಜೋಳಿಗೆಯೊಡ್ಡಿದಂತೆ ಜೋಳಿಗೆಯ ಪಾವಿತ್ರ್ಯದ ಜೊತೆಗೆ ಬಜೆಟ್ಟಿನ ಪಾವಿತ್ರ್ಯವನ್ನೂ ನಾಶ ಮಾಡಿರುವಾಗ, ಭ್ರಷ್ಟಾಚಾರವನ್ನೂ ಲಂಚಗುಳಿತನವನ್ನೂ ಸ್ವಜನಪಕ್ಷಪಾತವನ್ನೂ ಜೋಳಿಗೆಗೆ ಹಾಕಿಸಿಕೊಳ್ಳುವ ನೈತಿಕ ಅಧಿಕಾರವನ್ನು ಯಾವ ಜೋಳಿಗೆ ಉಳಿಸಿಕೊಂಡಿದೆ? ಹುಡುಕಬೇಕಿದೆ.

ಎಸ್.ಜಿ.ಸಿದ್ಧರಾಮಯ್ಯ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು