ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಭಿಕ್ಷೆ ತಪ್ಪಿಸಿ, ಇಲ್ಲವೇ ತೆರಿಗೆ ಪಡೆಯುವುದನ್ನು ನಿಲ್ಲಿಸಿ

Last Updated 6 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ನಗರಪಾಲಿಕೆಯವರು ಸ್ವತ್ತಿನ ತೆರಿಗೆ ಪಡೆಯುವ ಸಂದರ್ಭದಲ್ಲಿ ಭಿಕ್ಷುಕರ ಸೆಸ್ ಸಹ ವಸೂಲಿ ಮಾಡುತ್ತಾರೆ.‌ ಹಾಗೆಯೇ ರಾಜ್ಯ ಸರ್ಕಾರದ ವತಿಯಿಂದ ಭಿಕ್ಷುಕರ‌ ಪುನರ್ವಸತಿ ಕೇಂದ್ರವು ಕಾರ್ಯನಿರ್ವಹಿಸುತ್ತದೆ. ಪ್ರತೀ ನಗರದ ಬೀದಿ ದೀಪಗಳ ಬಳಿ ಇತ್ತೀಚೆಗೆ ಲೈಂಗಿಕ ಅಲ್ಪಸಂಖ್ಯಾತರು ಭಿಕ್ಷಾಟನೆ ನಡೆಸುವುದು ಮಿತಿಮೀರಿದೆ. ರೈಲುಗಳಲ್ಲಿಯೂ ಇವರ ಉಪಟಳ ವಿಪರೀತ ಹೆಚ್ಚಾಗಿದೆ.

ಇದನ್ನು ನಿಯಂತ್ರಿಸುವಲ್ಲಿ ಪಾಲಿಕೆಗಳು ಮತ್ತು ಪುನರ್ವಸತಿ ಕೇಂದ್ರಗಳು ವಿಫಲವಾಗಿವೆ. ಜೀವನ‌ ನಿರ್ವಹಣೆಗೆ ಸಹಾಯವಾಗುವಂತೆ ಇವರಿಗೆ ತರಬೇತಿ ನೀಡುವುದು ಪುನರ್ವಸತಿ ಕೇಂದ್ರಗಳ ಕೆಲಸ. ಅದನ್ನು ನಿರ್ವಹಿಸಲು ಸಾಧ್ಯವಾಗದಿದ್ದರೆ ಭಿಕ್ಷುಕರ ಸೆಸ್ ವಸೂಲಿ‌ ಮಾಡಲು ಸರ್ಕಾರಕ್ಕೆ ಯಾವುದೇ ಹಕ್ಕಿಲ್ಲ.

- ಎಸ್.ರವಿ,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT