ಮಹಾರಾಷ್ಟ್ರವೇ ಆಗಲಿ ಕರ್ನಾಟಕವೇ ಆಗಿರಲಿ ಗಡಿ ಗಲಾಟೆ ಜೋರಾಗಿ ಸದ್ದು ಮಾಡುವುದು ಚುನಾವಣೆ ಸಮಯದಲ್ಲಿಯೇ ಅನ್ನಿಸುತ್ತದೆ. ಸದ್ಯಕ್ಕೆ ಮಹಾರಾಷ್ಟ್ರ ಇದೀಗ ಮತ್ತೆ ಗಡಿ ಖ್ಯಾತೆ ತೆಗೆದಿದೆ. ಇದಕ್ಕೆ ಪ್ರತ್ಯುತ್ತರ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸರ್ವ ಪಕ್ಷ ಸಭೆ ಕರೆದು ಈ ಬಾರಿ ಸರಿಯಾದ ಖಡಕ್ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಆದರೆ ಈ ಹೇಳಿಕೆ ನೋಡಿದರೆ, ಇದು ಪೇಪರ್ ಹುಲಿ, ಬಟ್ಟೆ ಹಾವಿನಂತೆ ಕಾಣುತ್ತಿದೆ. ಏಕೆಂದರೆ ಮಹಾರಾಷ್ಟ್ರ ಮತ್ತು ಕರ್ನಾಟಕ ಎರಡೂ ಕಡೆ ಇರುವುದು ಬಿಜೆಪಿ ನೇತೃತ್ವದ ಸರ್ಕಾರಗಳು. ಜೊತೆಗೆ ಕೇಂದ್ರದಲ್ಲಿಯೂ ಬಿಜೆಪಿ ನೇತೃತ್ವದ ಸರ್ಕಾರವೇ ಇರುವುದರಿಂದ ಟ್ರಿಪಲ್ ಎಂಜಿನ್ ಸರ್ಕಾರ ಎನ್ನಬಹುದು. ಹೀಗಾಗಿ, ಗಡಿ ಸಮಸ್ಯೆ ಬಗೆಹರಿಯಲು ಇದು ಸುಕಾಲ.

ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಪ್ರಧಾನಿ ಮನಸ್ಸು ಮಾಡಿದರೆ ಸಮಸ್ಯೆ ಕ್ಷಣಾರ್ಧದಲ್ಲಿ ಒಂದೇ ಸಭೆಯಲ್ಲಿ ಮುಗಿಯುತ್ತದೆ. ಒಂದು ವೇಳೆ ಮೂರೂ ಕಡೆ ಒಂದೇ ಪಕ್ಷದ ನೇತೃತ್ವದ ಸರ್ಕಾರ ಇದ್ದರೂ ಗಡಿ ವಿವಾದ ಬಗೆಹರಿಯುತ್ತಿಲ್ಲ, ಸಮಸ್ಯೆ ಮತ್ತೆ ಮತ್ತೆ ಸದ್ದು ಮಾಡುತ್ತ ಕಗ್ಗಂಟಾಗುತ್ತಿದೆ ಎಂದಾದರೆ ಅದು ಇನ್ನೆಂದಿಗೂ ಬಗೆಹರಿಯಲಾರದು.

-ಬಸನಗೌಡ ಪಾಟೀಲ,ಯರಗುಪ್ಪಿ, ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.