ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಅಗ್ನಿಪಥ: ಬೆಂಕಿ ಹಚ್ಚಿ ತಿಳಿಸಬೇಕೆ?

Last Updated 19 ಜೂನ್ 2022, 19:31 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರ ಪರಿಚಯಿಸಿರುವ ಅಗ್ನಿಪಥ ಯೋಜನೆಯ ವಿರುದ್ಧ ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈ ಯೋಜನೆಯು ಸೇನಾ ನೇಮಕಾತಿಯಲ್ಲಿ ಶಾಶ್ವತ ಉದ್ಯೋಗ ಕಲ್ಪಿಸುವುದಿಲ್ಲ, ದೇಶದ ಅಭದ್ರತೆ ಮತ್ತು ಯುವಜನರಲ್ಲಿ ನಿರುದ್ಯೋಗದ ಸಮಸ್ಯೆ ಸೃಷ್ಟಿಸುತ್ತದೆ ಎನ್ನುವುದು ಹಲವರ ವಾದ.

ಯಾವುದೇ ಯೋಜನೆಯಾಗಲಿ ಅದರಲ್ಲಿ ನಕಾರಾತ್ಮಕ ಅಂಶಗಳು ಇದ್ದಾಗ ಆ ಯೋಜನೆಯನ್ನು ಪ್ರಶ್ನೆ ಮಾಡುವ ಹಕ್ಕು ಈ ಪ್ರಜಾಪ್ರಭುತ್ವ ದೇಶದಲ್ಲಿ ಇದೆ. ಆದರೆ ಪ್ರಶ್ನೆ ಮಾಡುವ, ಹೋರಾಡುವ ರೀತಿ- ನೀತಿ ಶಾಂತಿಯುತವಾಗಿರಬೇಕು. ಸಾರ್ವಜನಿಕ, ಖಾಸಗಿ ಆಸ್ತಿಗಳನ್ನು ಬೆಂಕಿ ಹಚ್ಚಿ ಧ್ವಂಸ ಮಾಡುವ, ಜನರ ಜೀವಕ್ಕೆ ಅಪಾಯ ತಂದೊಡ್ಡುವ ಹಿಂಸಾತ್ಮಕ ಪ್ರತಿಭಟನೆ ಅದಾಗಿರಬಾರದು. ಈಗಾಗಲೇ ನಿರುದ್ಯೋಗದ ಬೆಂಕಿಯಲ್ಲಿ ಬೇಯುತ್ತಿರುವ ಯುವಜನರಿಗೆ ಶಾಶ್ವತ ಉದ್ಯೋಗ ಬೇಕಿದೆಯೇ ವಿನಾ ತಾತ್ಕಾಲಿಕ ಉದ್ಯೋಗ ಅಲ್ಲ ಎನ್ನುವುದನ್ನು ಸರ್ಕಾರ ಈ ಮೂಲಕ ಅರಿಯಬೇಕೆ?ನಿರ್ಮಲಾ ನಾಗೇಶ್,ಮುರ್ಡೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT