ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದದಲ್ಲಿ ಉಭಯ ರಾಜ್ಯದವರೂ ಒಂದು ವಿಷಯವನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳಬೇಕು. ಅದೆಂದರೆ, ಮೊದಲಿಗೆ ನಾವು ಭಾರತೀಯರು, ನಂತರ ಪ್ರಾದೇಶಿಕರು, ಅದಕ್ಕೂ ಮಿಗಿಲಾಗಿ ಈ ವಿವಾದ ಕೋರ್ಟ್‌ನಲ್ಲಿದೆ. ಅಲ್ಲಿ ತಮ್ಮ ವಾದವನ್ನು ಸಮರ್ಥವಾಗಿ ಮಂಡಿಸಲಿ. ಅದನ್ನು ಬಿಟ್ಟು, ಗಡಿ ಭಾಗದಲ್ಲಿ ಸಂಚರಿಸುವ ವಾಹನಗಳಿಗೆ ಉಭಯ ರಾಜ್ಯಗಳ ಕೆಲ ಸಂಘಟನೆಗಳು ಮಸಿ ಬಳಿಯುವುದು ಮತ್ತು ಚಾಲಕರನ್ನು ನಿಂದಿಸುವುದು, ಹಲ್ಲೆ ಮಾಡುವುದು ಅಮಾನವೀಯ. ಇಂತಹ ಕೃತ್ಯಗಳನ್ನು ನಿಲ್ಲಿಸಬೇಕು. ಸಂಚಾರಕ್ಕೆ ತಡೆಯೊಡ್ಡಿದರೆ ಬಸ್ ಸಂಚಾರ ಸ್ಥಗಿತವಾಗುತ್ತದೆ. ಇದರಿಂದ ದಿನನಿತ್ಯ ಸಂಚರಿಸುವ ಚಾಲಕರು, ಕೂಲಿ ಕಾರ್ಮಿಕರು, ಪ್ರವಾಸಿಗರಂತಹವರಿಗೆತೊಂದರೆ ಆಗುವುದಿಲ್ಲವೇ?

-ಬೋರೇಗೌಡ ಜೆ.ಬಿ.,ಜಕ್ಕನಹಳ್ಳಿ, ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.