ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಹೋಲಿಕೆಯ ಚಾಳಿ ಸರಿಯಲ್ಲ

Last Updated 30 ನವೆಂಬರ್ 2022, 19:30 IST
ಅಕ್ಷರ ಗಾತ್ರ

‘ಕಾಂಗ್ರೆಸ್‌ನಲ್ಲಿ ಎಷ್ಟು ಜನ ರೌಡಿ ಶೀಟರ್‌ಗಳಿದ್ದಾರೆ ಎಂದು ಲೆಕ್ಕ ಹಾಕಲಿ’ ಎಂದಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಪ್ರ.ವಾ., ನ. 30). ಅಂದರೆ ರೌಡಿ ಶೀಟರ್‌ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರದಲ್ಲಾಗಲಿ ಅಥವಾ ಅವರೊಂದಿಗೆ ಸಂಪರ್ಕ ಇಟ್ಟುಕೊಳ್ಳುವ ವಿಚಾರದಲ್ಲಾಗಲಿ ಮುಖ್ಯಮಂತ್ರಿಯವರು ಕಾಂಗ್ರೆಸ್ ಪಕ್ಷದ ಜೊತೆಗೆ ಸ್ಪರ್ಧೆಗೆ ಇಳಿದಿದ್ದಾರೆಯೇ? ಅಥವಾ ಅವರಿಗೆ ಕಾಂಗ್ರೆಸ್ ಪಕ್ಷ ಆದರ್ಶವೇ? ಮುಖ್ಯಮಂತ್ರಿ ಅನುಸರಿಸುವುದು ಕಾಂಗ್ರೆಸ್ ಪಕ್ಷದ ಸಂಸ್ಕೃತಿಯನ್ನೋ ಅಥವಾ ಬಿಜೆಪಿ ಸಂಸ್ಕೃತಿಯನ್ನೋ? ಸರ್ಕಾರದ ಬೇರೆ ಬೇರೆ ತಪ್ಪುಗಳ ಬಗ್ಗೆ ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷದ ಮುಖಂಡರು ಏನಾದರೂ ಪ್ರಶ್ನೆ ಹಾಕಿದಾಗಲೂ ಇದೇ ರೀತಿ ಉತ್ತರ ನೀಡುವ ವರಸೆಯನ್ನು ಬಿಜೆಪಿ ಅನುಸರಿಸುತ್ತಿದೆ. ಕಾಂಗ್ರೆಸ್ ಅಥವಾ ಜೆಡಿಎಸ್ ಆಳ್ವಿಕೆ ಸರಿಯಿಲ್ಲ ಎಂಬ ಕಾರಣದಿಂದಲೇ ಅಲ್ಲವೆ ಬಿಜೆಪಿಗೆ ಹೆಚ್ಚು ಸ್ಥಾನ ಕೊಟ್ಟಿರುವುದು?

ತನ್ನ ಆಳ್ವಿಕೆ ಬಗ್ಗೆ ಎದುರಾಗುವ ಪ್ರಶ್ನೆಗಳಿಗೆ ಸಮರ್ಥ ಉತ್ತರ ನೀಡಬೇಕೆ ಹೊರತು, ಕಾಂಗ್ರೆಸ್ ಅಥವಾ ಜೆಡಿಎಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಘಟಿಸಿದ ತಪ್ಪುಗಳ ಕಡೆ ಬೆರಳು ತೋರಿಸುವ ಮೂಲಕ ಜಾರಿಕೊಳ್ಳುವ ಪ್ರಯತ್ನ ತರವಲ್ಲ.ಪಕ್ಷ ಯಾವುದೇ ಇರಲಿ ಅದು ಅಧಿಕಾರದಲ್ಲಿದ್ದಾಗ ತನ್ನ ನೀತಿ–ನಿಲುವುಗಳ ಬಗ್ಗೆ ಸಮರ್ಥನೆ ಒದಗಿಸಬೇಕು. ತಪ್ಪುಗಳಾಗಿದ್ದರೆ ತಿದ್ದಿಕೊಳ್ಳಬೇಕು. ಅದನ್ನು ಬಿಟ್ಟು ಹಿಂದಿನವರ ಆಳ್ವಿಕೆಯಲ್ಲಿ ಆಗಿರುವ ತಪ್ಪುಗಳಿಗೆ ಹೋಲಿಸಿಕೊಂಡು ತಮ್ಮ ತಪ್ಪುಗಳನ್ನು ಸಮರ್ಥಿಸುವ ಚಾಳಿ ಸರಿಯಲ್ಲ. ಅದು ಜವಾಬ್ದಾರಿಯುತ ನಡೆಯೂ ಅಲ್ಲ.

- ಹುರುಕಡ್ಲಿ ಶಿವಕುಮಾರ,ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT