ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಅಸಾಂಸ್ಕೃತಿಕ ನಡೆಗೆ ಬೀಳಲಿ ತಡೆ

Last Updated 7 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಇಂದಿನ ಗಣೇಶೋತ್ಸವ ತನ್ನ ಸಾಂಸ್ಕೃತಿಕ ಆಯಾಮವನ್ನೇ ಕಳೆದುಕೊಳ್ಳುತ್ತಿದೆ. ಹಾಡು, ಭಜನೆ, ಭಕ್ತಿಗೀತೆ, ಶಾಸ್ತ್ರೀಯ ನೃತ್ಯ, ಸಂಗೀತ, ಪುರಾಣ ವಾಚನದಂತಹ ಸಾತ್ವಿಕ ಚಟುವಟಿಕೆಗಳಿಗೆ ಹೆಸರಾಗಿದ್ದ ಉತ್ಸವದಲ್ಲಿ ಅಬ್ಬರ, ಆಡಂಬರ ವಿಜೃಂಭಿಸುತ್ತಿವೆ. ಅದರಲ್ಲೂ ಡಿ.ಜೆ ಶಬ್ದವಂತೂ ಎಂತಹವರಿಗೂ ಒಂದು ನಿಮಿಷ ಎದೆಬಡಿತ ನಿಂತು ಹೋಗುವಂತೆ ಇರುತ್ತದೆ.

ನಗರದ ಮುಖ್ಯ ರಸ್ತೆಯಲ್ಲಿದ್ದ ಗಣೇಶೋತ್ಸವದ ಮೇಲೆ ಕಣ್ಣು ಹಾಯಿಸಿದಾಗ ನನಗೆ ಒಂದು ಕ್ಷಣ ಭಯವಾಗಿದ್ದಂತೂ ನಿಜ. ಏಕೆಂದರೆ ಅಲ್ಲಿ ಹಾಕಿದ್ದ ಎಲ್ಲಾ ಪೋಸ್ಟರ್‌ಗಳು ವ್ಯಘ್ರತೆಯಿಂದ ಕೂಡಿದ್ದವು. ಒಂದು ಪೋಸ್ಟರ್‌ನಲ್ಲಂತೂ ಶಿವಾಜಿ ತನ್ನನ್ನು ಕೊಲ್ಲಲು ಬಂದ ಅಫ್ಜಲ್ ಖಾನ್‌ನನ್ನು ಹುಲಿಯ ಉಗುರಿನಿಂದ ಸೀಳುತ್ತಿರುವ ಚಿತ್ರವಿತ್ತು. ಈ ಮೂಲಕ ಇವರೆಲ್ಲ ಏನು ಹೇಳಲು ಹೊರಟಿದ್ದಾರೆ ಎಂಬ ಪ್ರಶ್ನೆ ಮೂಡಿ ತಬ್ಬಿಬ್ಬಾಯಿತು. ಸಾಂಸ್ಕೃತಿಕ, ಸಾತ್ವಿಕ, ದೈವಿಕ ಭಾವನೆಗಳನ್ನು ಬೆಳೆಸಬೇಕಾದ ದೇವರ ಉತ್ಸವಗಳು ಹೀಗೆ ರೋಷಾವೇಶದ ಅಭಿವ್ಯಕ್ತಿಗೆ ವೇದಿಕೆಯಾಗುವುದು ತರವೇ?

- ಸುವರ್ಣ ಸಿ.ಡಿ.,ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT