ಬುಧವಾರ, ಮಾರ್ಚ್ 29, 2023
23 °C

ವಾಚಕರ ವಾಣಿ| ಕಾಂಕ್ರೀಟ್‌ಮಯ ಮಾಡುವುದೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಹೆಚ್ಚಿನ ರಸ್ತೆಗಳಲ್ಲಿ ಡಾಂಬರು ಮಾಯವಾಗಿ, ಅದರ ಸ್ಥಾನದಲ್ಲಿ ವೈಟ್ ಟಾಪಿಂಗ್ ಹೆಸರಿನಲ್ಲಿ ಕಾಂಕ್ರೀಟ್‌ ರಸ್ತೆಗಳಾಗುತ್ತಿವೆ. ಮಧ್ಯಾಹ್ನದ ಸುಡುಬಿಸಿಲಿನಲ್ಲಿ ಕಾಂಕ್ರೀಟಿನ ತಾಪಮಾನ, ಸೂರ್ಯನ ತಾಪಮಾನ ಸೇರಿ ಬೆಂಕಿಯ ಉಂಡೆಗಳು ಭೂಮಿಗೆ ಬರುವ ಅನುಭವ ಆಗುತ್ತಿದೆ.

ಹಿಂದೆ ರಸ್ತೆಯ ಮಧ್ಯದ ಡಿವೈಡರ್‌ಗಳಲ್ಲಿ ಗಿಡಗಳನ್ನು ಬೆಳೆಸುವ ಪದ್ಧತಿ ಇತ್ತು. ಕನಿಷ್ಠ ಅಲ್ಲಿಯಾದರೂ ಮಳೆಯ ನೀರು ಸೇರುತ್ತಿತ್ತು ಅಥವಾ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ನೀರನ್ನು ಹಾಕಲಾಗುತ್ತಿತ್ತು. ನೀರು ಭೂಮಿಯ ಒಡಲು ಸೇರಿ ಸ್ವಲ್ಪಮಟ್ಟಿನ ತಂಪಾದರೂ ಇರುತ್ತಿತ್ತು. ಅಲ್ಲಿ ಬೆಳೆದ ಹೂಗಳು ಹಾಗೂ ಹಸಿರು ಗಿಡಗಳು ರಸ್ತೆಯ ಅಂದವನ್ನು ಹೆಚ್ಚಿಸುತ್ತಿದ್ದವು. ಆದರೆ ಇತ್ತೀಚೆಗೆ ಆ ಜಾಗಕ್ಕೂ ಕಾಂಕ್ರೀಟ್ ತುಂಬಿ, ಅದರ ಮೇಲೆ ಕಾಂಕ್ರೀಟ್ ಬ್ಯಾರಿಕೇಡುಗಳನ್ನು ನಿರ್ಮಿಸಿ ಬಿಸಿಲಿನ ಬೇಗೆ ಇನ್ನಷ್ಟು ಹೆಚ್ಚಲು ಕಾರಣರಾಗುತ್ತಿದ್ದಾರೆ. ಇದು ಪರಿಸರಕ್ಕೆ ಅಪಾಯ ತಂದೊಡ್ಡುತ್ತದೆ. ಮೊದಲಿನಂತೆ ಡಿವೈಡರ್‌ಗಳಲ್ಲಿ ಹಸಿರನ್ನು ಬೆಳೆಸಿ, ಸರಿಯಾಗಿ ನಿರ್ವಹಣೆ ಮಾಡಿ ‘ಉದ್ಯಾನನಗರಿ’ ಎಂಬ ಹೆಸರನ್ನು ಉಳಿಸಿಕೊಳ್ಳಲು ಬಿಬಿಎಂಪಿ ಮುಂದಾಗಲಿ.

– ಮಲ್ಲತ್ತಹಳ್ಳಿ ಡಾ. ಎಚ್. ತುಕಾರಾಂ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು