ಬುಧವಾರ, ಫೆಬ್ರವರಿ 1, 2023
17 °C

ವಾಚಕರ ವಾಣಿ| ಮೊಳೆಯಲಿ ಕರ್ತವ್ಯವೆಂಬ ಅರಿವಿನ ಬೀಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾನಾಪುರ ತಾಲ್ಲೂಕಿನ ನಾವಗಾ ಗ್ರಾಮದ ಹೊರವಲಯದಲ್ಲಿ 90 ವರ್ಷದ ವೃದ್ಧೆಯೊಬ್ಬರನ್ನು ನಿತ್ರಾಣ ಸ್ಥಿತಿಯಲ್ಲಿ ಬಿಟ್ಟು ಹೋಗಿರುವ ವರದಿಯನ್ನು (ಪ್ರ.ವಾ., ಜ. 24) ಓದಿದಾಗ, ಪಾಪಪ್ರಜ್ಞೆಯು ಕಾಡದಿರುವ ಮಟ್ಟಿಗೆ ಮನುಷ್ಯ ಅಧೋಗತಿಗೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ ಎನಿಸಿತು.

ನಮ್ಮನ್ನು ಸಾಕಿ–ಸಲುಹಿದ ಹೆತ್ತವರಿಗೆ ಊರುಗೋಲಾಗಿ ನಿಲ್ಲಬೇಕು. ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಅವರ ಬಗೆಗೆ ಕಾಳಜಿ ವಹಿಸಬೇಕು ಮತ್ತು ಬೆಂಬಲವನ್ನು ನೀಡಬೇಕು. ಇದು, ಮಕ್ಕಳ ಕರ್ತವ್ಯವೆಂಬ ಮನುಷ್ಯತ್ವದ ಅರಿವಿನ ಬೀಜವನ್ನು ಎಲ್ಲರೊಳಗೆ ಬಿತ್ತಬೇಕಾಗಿದೆ. 

 – ಪ್ರವೀಣ ನಾಗಪ್ಪ ಯಲವಿಗಿ, ಹಾವೇರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು